ನೆಲ್ಯಾಡಿಗೆ ಆಗಮಿಸಿದ ನಂದಿ ರಥ ಯಾತ್ರೆ.

 ಗೋ ಸೇವಾ ಗತಿ ವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರಿಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ನೇತೃತ್ವದಲ್ಲಿ ಕರ್ನಾಟಕ ರಾಜ್ಯಾದ್ಯಂತ 80ದಿನಗಳ ಕಾಲ ನಡೆಯಲಿರುವ ರಥ ಯಾತ್ರೆಯು ಮಾರ್ಚ್ 14ರಂದು ನೆಲ್ಲ್ಯಾಡಿಗೆ ಆಗಮಿಸಿತು ಕೌಕ್ರಾಡಿ ಗ್ರಾಮದ ಹೊಸಮಜಲಿನಲ್ಲಿ ನಂದಿ ರಥ ಯಾತ್ರೆಯನ್ನು ಎದುರು ಗೊಂಡು ಮಾಲಾರ್ಪಣೆ ಮಾಡಲಾಯಿತು ಈ ಸಂದರ್ಭದಲ್ಲಿ ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ್ ಕುಮಾರ್ ಗೌಡ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲ್, ಉಪಾಧ್ಯಕ್ಷ ರವಿಚಂದ್ರ ಹೊಸವೊಕ್ಲು,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದಿನೇಶ್ ಮೆದು, ನೆಲ್ಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯ ಜಯಾನಂದ ಬಂಟ್ರಿಯಾಲ್,ಶ್ರೀಮತಿ ಬೇಬಿ ಸದಾನಂದ,ಅಶ್ವಥ ಗೆಳೆಯರ ಬಳಗದ ಸುಧೀರ್ ಕೃಷ್ಣ ಬಟ್ಟೆಸಾಗು, ಸೋನಿತ್, ಮಿಥುನ್, ಹಿಂದೂ ಜಾಗರಣ ವೇದಿಕೆಯ ಮೋಹನ್ ಕಟ್ಟೆಮಜಲು, ಕೌಕ್ರಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಲೋಕೇಶ್ ಬಾಣಜಾಲ್, ಕುಶಾಲಪ್ಪ ಅನಿಲ, ನೆಲ್ಲ್ಯಾಡಿ ಜೆ. ಸಿ. ಐ ನ ನವ್ಯ ಪ್ರಸಾದ್, ಹಾಲು ಉದ್ಪಾದಕರ ಸಂಘದ ಜಯರಾಮ ಬಾಣಜಾಲ್, ಅಯ್ಯಪ್ಪ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮೊದಲಾದವರಿದ್ದರು.

Post a Comment

أحدث أقدم