"ರೆಂಜಿಲಾಡಿಯಲ್ಲಿ ಉಳ್ಳಾಲ್ತಿ ಅಮ್ಮನ ಜಾತ್ರೆ ಆರಂಭ: ನಾಡಿನ ಸಹಸ್ರಾರು ಭಕ್ತರು ಸೇರುವ ಪವಿತ್ರ ನೇಮೋತ್ಸವ"

ಕಡಬ: ರೆಂಜಿಲಾಡಿ ಗ್ರಾಮದ ನೂಜಿಬೈಲ್‌ನಲ್ಲಿ ಭಕ್ತರ ನಂಬಿಕೆಯ ಕೇಂದ್ರಬಿಂದುವಾಗಿರುವ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ಜಾತ್ರೆಯು ಭಕ್ತಿಭರಿತವಾಗಿ ಆರಂಭಗೊಂಡಿದೆ. ಏಪ್ರಿಲ್ 11ರಂದು ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಜಾತ್ರೆಗೆ ಅದ್ದೂರಿ ಚಾಲನೆ ನೀಡಲಾಯಿತು.

ಬೆಳಿಗ್ಗೆ ಪ್ರಾರ್ಥನೆ, ಧ್ವಜಾರೋಹಣ, ಅಶ್ವತ್ಥ ಪೂಜೆ ನಂತರ ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ಅನ್ನಸಂತರ್ಪಣೆ ನಡೆಯಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನೆರವೇರಿಸಲ್ಪಟ್ಟವು. ಕ್ಷೇತ್ರದ ಅರ್ಚಕರು, ಸಮಿತಿಯ ಪದಾಧಿಕಾರಿಗಳು, ಟ್ರಸ್ಟ್ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಮೂರು ದಿನಗಳ ನೇಮೋತ್ಸವ:

ಏಪ್ರಿಲ್ 12 (ಶನಿವಾರ):

ಸಂಜೆ 6ಕ್ಕೆ: ಶ್ರೀ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ಸ್ವಾಗತ

ರಾತ್ರಿ 7ಕ್ಕೆ: ರಂಗಪೂಜೆ, ಪ್ರಸಾದ ವಿತರಣೆ

8.30ಕ್ಕೆ: ಅಲ್ಲತ್ತಾಯ ಹಾಗೂ ಪಂಜುರ್ಲಿ ದೈವಗಳ ನೇಮ

9.30ಕ್ಕೆ: ಅನ್ನಸಂತರ್ಪಣೆ


ಏಪ್ರಿಲ್ 13 (ಭಾನುವಾರ):

ಬೆಳಗ್ಗೆ 9.15ಕ್ಕೆ: ಉಳ್ಳಾಲ್ತಿ ಅಮ್ಮನ ನೇಮ

ಮಧ್ಯಾಹ್ನ 12ಕ್ಕೆ: ಪ್ರಸಾದ ವಿತರಣೆ

ಅಪರಾಹ್ನ 3ಕ್ಕೆ: ಧ್ವಜ ಅವರೋಹಣ

ಸಂಜೆ 6.11ಕ್ಕೆ: ಗುಳಿಗ ದೈವದ ನೇಮ

ರಾತ್ರಿ 9ಕ್ಕೆ: ಅನ್ನಸಂತರ್ಪಣೆ


ಏಪ್ರಿಲ್ 14 (ಸೋಮವಾರ):

ಬೆಳಗ್ಗೆ 9.15ಕ್ಕೆ: ಶುದ್ಧಿ ಕಲಶ

ಮಧ್ಯಾಹ್ನ 12.30ಕ್ಕೆ: ಮಹಾಪೂಜೆ

1ಕ್ಕೆ: ಅನ್ನಸಂತರ್ಪಣೆ

ರಾತ್ರಿ 7ಕ್ಕೆ: ಶಿರಾಡಿ ದೈವಗಳ ನೇಮ

ರಾತ್ರಿ 9ಕ್ಕೆ: ಅನ್ನಸಂತರ್ಪಣೆ


ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಈ ಧಾರ್ಮಿಕ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಾತ್ರೆಯು ಜನಸಾಮಾನ್ಯರಿಗೆ ಭಕ್ತಿ, ಶ್ರದ್ಧೆ ಹಾಗೂ ಸಾಂಸ್ಕೃತಿಕ ಆಚರಣೆಯ ಸ್ಮರಣೀಯ ಕ್ಷಣವಾಗಿದೆ.

Post a Comment

Previous Post Next Post