ಕಡಬ: ಪೆರಾಬೆ ರಸ್ತೆಯಲ್ಲಿ ಅಪಾಯಕಾರಿ ಚಾಲನೆ — ಮೂವರು ಕಾರುಚಾಲಕರ ವಿರುದ್ಧ ಪ್ರಕರಣ ದಾಖಲು.

ಕಡಬ, ಎಪ್ರಿಲ್ 27: ಕಡಬ ತಾಲೂಕು ಪೆರಾಬೆ ಗ್ರಾಮದ ಹತ್ತಿರದ ಉಪ್ಪಿನಂಗಡಿ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ರಸ್ತೆಯಲ್ಲಿ, ದಿನಾಂಕ 27-04-2025 ರಂದು ರಾತ್ರಿ, ಮೂವರು ಕಾರುಚಾಲಕರು ಅಜಾಗರೂಕತೆಯಿಂದ ಹಾಗೂ ಅಪಾಯಕಾರಿಯಾಗಿ ವಾಹನಗಳನ್ನು ಚಲಾಯಿಸುತ್ತಿರುವುದಾಗಿ ದೃಢಪಟ್ಟಿದೆ.

ಸ್ಥಳೀಯರೊಬ್ಬರು ದಾಖಲು ಮಾಡಿದ ವಿಡಿಯೋದಲ್ಲಿ, ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ ಕೆಲವರು ಕಿಟಕಿಯಿಂದ ಹೊರಬಂದು ಬೊಬ್ಬೆ ಹಾಕುತ್ತಿರುವ ದೃಶ್ಯಗಳು ಸ್ಪಷ್ಟವಾಗಿದ್ದು, ಇದು ರಸ್ತೆ ಸಂಚಾರಕ್ಕೂ ಅಪಾಯವನ್ನುಂಟುಮಾಡುತ್ತಿರುವುದಾಗಿ ಕಂಡು ಬಂದಿದೆ.

ವಿಡಿಯೋ ಪರಿಶೀಲನೆಯ ವೇಳೆ, ಅಪಾಯಕಾರಿಯಾಗಿ ಚಾಲನೆ ಮಾಡಿದ ಮೂರು ಕಾರುಗಳ ಪೈಕಿ ಎರಡು ಕಾರುಗಳ ನೊಂದಣಿ ಸಂಖ್ಯೆಗಳನ್ನು ಪತ್ತೆ ಹಚ್ಚಲಾಗಿದೆ:

KA 19 ME 4400

KA 34 N 5909


ಮೂರನೇ ಕಾರಿನ ನೊಂದಣಿ ವಿವರ ಲಭ್ಯವಾಗಿಲ್ಲ.

ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 30/2025, ಭಾರತೀಯ ದಂಡ ಸಂಹಿತೆ (BNS-2023) ಕಲಂ 281 ಮತ್ತು ವಾಹನ ಚಲಾವಣೆ ನಿಯಮ ಉಲ್ಲಂಘನೆ (IMV Act) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Post a Comment

Previous Post Next Post