ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಇತಿಹಾಸ ವಿಭಾಗ ಮತ್ತು ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಪ್ರತಿ ವರ್ಷವೂ ಪ್ರಾಕೃತ ಸರ್ಟಿಫಿಕೇಟ್ ಹಾಗೂ ಡಿಪ್ಲೋಮಾ ಕೋರ್ಸ್‌ಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಇತ್ತೀಚೆಗೆ ಈ ಕೋರ್ಸ್‌ಗಳ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಪ್ರಾಕೃತ ಪ್ರವೇಶ ಮತ್ತು ಡಿಪ್ಲೋಮಾ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಈ ಬಾರಿ ಕೋರ್ಸ್‌ಗಳಿಗೆ ಒಟ್ಟು 31 ವಿದ್ಯಾರ್ಥಿಗಳು ದಾಖಲಾಗಿ ಪರೀಕ್ಷೆಗೆ ಹಾಜರಾಗಿದ್ದು, ಬಹುಪಾಲು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಾಕೃತ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಬಿಎ ವಿದ್ಯಾರ್ಥಿಗಳು ಅರ್ಪಿತ ಕೆ.ವಿ ಬೆಳ್ಳಿ ಪದಕ, ಕಾವ್ಯ ಪಿ ಕಂಚು ಪದಕ ಮತ್ತು ಯಕ್ಷಿತ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಡಿಪ್ಲೋಮಾ ವಿಭಾಗದಲ್ಲಿ ಅನ್ವಿತಾ ಎಂ.ಎನ್ ಹಾಗೂ ವಿನುತಾ ಪಿ ನಾಲ್ಕನೇ ರಾಂಕ್, ಲಿಖಿತ ಡಿ.ಎನ್ ಐದನೇ ರಾಂಕ್ ಪಡೆದಿದ್ದಾರೆ. ಈ ಕೇಂದ್ರದಲ್ಲಿ 16 ಮಂದಿ ಡಿಸ್ಟಿಂಕ್ಷನ್, 7 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಮೂಲಕ ಅವರ ಸಾಧನೆಯನ್ನು ಗೌರವಿಸಲಾಯಿತು. ಈ ಕಾರ್ಯಕ್ರಮದ ಯಶಸ್ಸಿಗೆ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಪ್ರಸಾದ್ ಎನ್ ಹಾಗೂ ಉಪನ್ಯಾಸಕಿ ನಮಿತಾ ಎಂ.ಎ. ಅವರ ಮಾರ್ಗದರ್ಶನ ಮುಖ್ಯ ಕಾರಣವಾಗಿದೆ.
Post a Comment