ಕುಕ್ಕೆ ಸುಬ್ರಹ್ಮಣ್ಯ;ಮುಜರಾಯಿ ಸಚಿವ ರಾಮಲಿಂಗಾರೆಡ್ಡಿಯವರ ಆದೇಶದಂತೆ, ಭಾರತೀಯ ಸೇನೆಯ ಮಹತ್ವದ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ್’ ಯಶಸ್ವಿಯಾಗಿ ನೆರವೇರಬೇಕು ಎಂಬ ಹಿನ್ನಲೆಯಲ್ಲಿ ಮೇ 9 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ, ಪಂಚಾಮೃತ ಮತ್ತು ಮಹಾಭಿಷೇಕ ನೆರವೇರಿಸಲಾಯಿತು.
ನಮ್ಮ ದೇಶವನ್ನು ರಕ್ಷಿಸಲು ಸದಾ ಮುಂಚೂಣಿಯಲ್ಲಿ ನಿಲ್ಲುವ ಸೈನಿಕರು ಯಾವಾಗಲೂ ಸುರಕ್ಷಿತರಾಗಿರಲಿ, ಯುದ್ಧ ಸಂದರ್ಭದಲ್ಲಿ ಯಾವುದೇ ತೊಂದರೆ ಉಂಟಾಗದಿರಲಿ, ಪ್ರಾಣ ಹಾನಿಯಾಗದಿರಲಿ ಎಂದು ದೇಶದ ಪ್ರತಿಯೊಬ್ಬ ಪ್ರಜೆ ಪಕ್ಷಾತೀತವಾಗಿ ಒಂದೇ ಮನಸ್ಸಿನಿಂದ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಮುಖ್ಯ ಅರ್ಚಕರು ಮಾರ್ಗದರ್ಶನದಲ್ಲಿ ಈ ವಿಧಿವಿಧಾನಗಳು ನಡೆದವು. ದೇವಳದ ಸಿಬ್ಬಂದಿಗಳು, ಸ್ಥಳೀಯ ಪ್ರಮುಖರು ಹಾಗೂ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇಂತಹ ಪೂಜೆಯು ನಮ್ಮ ಸೇನೆಗೆ ಇನ್ನಷ್ಟು ಶಕ್ತಿ, ಶೌರ್ಯ ಮತ್ತು ಪ್ರೇರಣೆಯನ್ನು ನೀಡಲು ಸಹಕಾರಿಯಾಗಲಿ ಎಂದು ಭಕ್ತರು ಪ್ರಾರ್ಥನೆ ಸಲ್ಲಿಸಿದರು.
إرسال تعليق