"ಮಳೆಗಾಲದ ಮುಂಚಿನ ಪ್ರಾಕೃತಿಕ ವಿಕೋಪಗಳ ತಯಾರಿ ಸಭೆ – ದರ್ಪಣ ತೀರ್ಥ ನದಿ ಹೂಳೆತ್ತುವ ಅಗತ್ಯ, ಭೂ ಕುಸಿತ ತಡೆ, ಮತ್ತು ಸುರಕ್ಷತಾ ಮುಂಜಾಗ್ರತ ಕ್ರಮ" ಅಗತ್ಯ....ಹರೀಶ್ ಇಂಜಾಡಿ.

ಕುಕ್ಕೆ ಸುಬ್ರಹ್ಮಣ್ಯ, ಮೇ 6:
ಗ್ರಾಮ ಪಂಚಾಯತ್ ಕುಮಾರಧಾರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಇಂಜಾಡಿ ಮಾತನಾಡಿ,ದರ್ಪಣ ತೀರ್ಥ ನದಿಯ ಹೂಳೆತ್ತುವ ಅಗತ್ಯವನ್ನು ಪ್ರಸ್ತಾಪಿಸಿದರು. ನದಿ ಹೂಳು ಏರಿಕೆಯಾಗಿ ನೀರಿನ ಹರಿವು ಅಡಗಿಸುವ ಸಾಧ್ಯತೆ ಇದ್ದು ನೆರೆಸೃಷ್ಟಿ ಆಗಬಹುದು ಮುಂಜಾಗ್ರತ ಕ್ರಮ ಕೈಗೊಳ್ಳಬೇಕು,
ಕುಮಾರಧಾರ ನದಿ ಬಳಿ, ದರ್ಪಣ ತೀರ್ಥ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಸೇತುವೆ ಮತ್ತು ಪರ್ವತಮುಖಿ ವರೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿ ಮಳೆಗಾಲದ ಮೊದಲು ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ. ಇದರ ಪರಿಣಾಮವಾಗಿ, ಕೃತಕ ನೆರೆ ಉಂಟಾಗಿ ಸಾರ್ವಜನಿಕರಿಗೆ ತೊಂದರೆ ಆಗಬಹುದೆಂದು ಸೂಚನೆ ನೀಡಿದರು.
ನುಚಿಲದಲ್ಲಿ ಮಳೆಗಾಲದಲ್ಲಿ ದರೆ ಕುಸಿಯುವ ಸಮಸ್ಯೆ ವಸತಿಯಲ್ಲಿರುವವರನ್ನ ಬೇರೆಡೆಗೆ ಕಲಿಸಿಕೊಡೋದು. ಈ ಹಿನ್ನೆಲೆ, 94/ಸಿ ಅಡಿಯಲ್ಲಿ ಮನೆ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯಿಂದ ಅನುಮತಿ ನೀಡುವಾಗ, ಭೂ ಕುಸಿತದ ಅಪಾಯವಿರುವ ಪ್ರದೇಶಗಳಲ್ಲಿ ಮನೆ ಕಟ್ಟಲು ಅನುಮತಿ ನೀಡಬಾರದು.
ಪ್ರಾಕೃತಿಕ ವಿಕೋಪಗಳ ಸಂದರ್ಭ ಜನಸಾಮಾನ್ಯರ ರಕ್ಷಣೆಗೆ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು.

ಸುಬ್ರಹ್ಮಣ್ಯ ಕೆಲವು ಭಾಗಗಳಲ್ಲಿ ತಜ್ಞರಿಂದ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ ಮಳೆಗಾಲದಲ್ಲಿ ಸಿಡಿಲಿನ ಆಘಾತ ಸಂಭವಿಸಬಹುದಾದ ಪ್ರದೇಶಗಳಲ್ಲಿ ಮಿಂಚು ಬಂಧಕಗಳನ್ನು ಅಳವಡಿಸಬೇಕು,

 "ನದಿಯ ಹೂಳೆತ್ತುವ ಕಾರ್ಯ ನಡೆಸಿ ಕೃತಕ ನೆರೆ ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು"ಎಂದು ಹರೀಶ್ ಇಂಜಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಹಲವು ಸ್ಥಳೀಯರು ತಮ್ಮ ತಮ್ಮ ಪ್ರದೇಶದ ಸಮಸ್ಯೆಗಳನ್ನು ಮುಂದಿಟ್ಟರು. ನಾರಾಯಣ ಅಗ್ರಹಾರದವರು ದೇವಾಲಯದ ಮಾರ್ಗದ ಪಕ್ಕದಲ್ಲಿ ತುಂಬಿಕೊಂಡಿರುವ ಕಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರಾಜೇಶ್ ಎನ್.ಎಸ್. ಅವರು ವಿದ್ಯುತ್ ಲೈನ್ ಹತ್ತಿರವಿರುವ ಅಪಾಯಕಾರಿ ಮರಗಳ ಬಗ್ಗೆ ಗಮನಾರ್ಹ ವಿಚಾರ ಪ್ರಸ್ತಾಪಿಸಿದರು.
ಸಭೆಗೆ ಪಂಚಾಯತ್ ಅಧ್ಯಕ್ಷೆ ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜೇಶ್ ಎನ್.ಎಸ್., ಪೊಲೀಸ್ ಅಧಿಕಾರಿ ಕಾರ್ತಿಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್, ಕಾರ್ಯದರ್ಶಿ ಮೋನಪ್ಪ, ಮತ್ತು ಆರೋಗ್ಯಾಧಿಕಾರಿ ಡಾ. ತ್ರಿಮೂರ್ತಿ ಉಪಸ್ಥಿತರಿದ್ದರು. ಸಭೆಯಲ್ಲಿ ಅಧಿಕಾರಿಗಳು ಪ್ರಸ್ತಾಪವಾದ ಎಲ್ಲಾ ವಿಚಾರಗಳನ್ನು ಗಮನದಿಂದ ಕೇಳಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Post a Comment

أحدث أقدم