ಚಲನಚಿತ್ರ ನಟ ರಾಜಶೇಖರ್ ಕೋಟ್ಯಾನ್ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀ ದೇವರ ದರ್ಶನ.

ಕುಕ್ಕೆ ಸುಬ್ರಹ್ಮಣ್ಯ | ಜೂನ್ 24:
ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಹಾಗೂ ಚಲನಚಿತ್ರ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿರುವ ರಾಜಶೇಖರ್ ಕೋಟ್ಯಾನ್ ಅವರು ಜೂನ್ 24ರಂದು ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಾಲಯಕ್ಕೆ ಬೇಟಿ ನೀಡಿದರು.

ಈ ಸಂದರ್ಭ ಅವರು ಶ್ರೀ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ ಇಂಜಾಡಿ ಅವರು ರಾಜಶೇಖರ್ ಕೋಟ್ಯಾನ್ ಅವರನ್ನು ಗೌರವಿಸಿ ಸನ್ಮಾನಿಸಿದರು.

ಈ ಧಾರ್ಮಿಕ ಭೇಟಿ ಸಂದರ್ಭದಲ್ಲಿ ರವಿ ಕಕ್ಕೆ ಪದವು, ಪ್ರವೀಣ ಕೋಟ್ಯಾನ್, ದಿನೇಶ ಕೋಟ್ಯಾನ್, ಸೋಮನಾಥ ಪೂಜಾರಿ, ಧೀರಜ್ ಕೋಟ್ಯಾನ್ ಹಾಗೂ ಮಾಸ್ಟರ್ ಪ್ಲಾನ್ ಸದಸ್ಯರಾದ ಸತೀಶ ಕೂಜುಗೋಡು ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೇವಾಲಯದ ಪರಿಸರದಲ್ಲಿ ಭಕ್ತರೊಂದಿಗೆ ರಾಜಶೇಖರ್ ಕೋಟ್ಯಾನ್ ಅವರು ಸಂವಾದ ನಡೆಸಿದರು ಮತ್ತು ಅವರ ಸಮಾಜ ಸೇವಾ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು.

Post a Comment

أحدث أقدم