ಕುಮಾರ ನಾಯರ್ ಸ್ಮರಣಾರ್ಥ ರಕ್ತದಾನ ಶಿಬಿರ – 25 ಯುನಿಟ್ ರಕ್ತ ಸಂಗ್ರಹ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ.

ಸುಬ್ರಹ್ಮಣ್ಯ, ಜೂನ್ 3: "ಅನುಗ್ರಹ ಎಜುಕೇಶನ್ ಟ್ರಸ್ಟ್" ಸಂಸ್ಥಾಪಕ ದಿ. ಕುಮಾರ ನಾಯರ್ ಅವರ ಜನ್ಮದಿನದ ಪ್ರಯುಕ್ತ, ಸಂಸ್ಥೆಯು ಪುತ್ತೂರು ಬ್ಲಡ್ ಸೆಂಟರ್ ಸಹಯೋಗದಲ್ಲಿ ವಿಶೇಷ ರಕ್ತದಾನ ಶಿಬಿರ ಹಾಗೂ ವಿದ್ಯಾರ್ಥಿ ಅಭಿನಂದನಾ ಸಮಾರಂಭವನ್ನು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿತು.

ಕಾರ್ಯಕ್ರಮದಲ್ಲಿ 25 ಯುನಿಟ್‌ ರಕ್ತವನ್ನು ಯಶಸ್ವಿಯಾಗಿ ಸಂಗ್ರಹಿಸಲಾಗಿದ್ದು, ಶೈಕ್ಷಣಿಕ ವರ್ಷ 2023–24ರಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಸನ್ಮಾನ ನೀಡಲಾಯಿತು.



ಶಿಬಿರವನ್ನು ಸುಳ್ಯ ಸುದ್ದಿ ಬಿಡುಗಡೆಯ ಸಂಪಾದಕ ಹರೀಶ್ ಬಂಟ್ವಾಳ ದೀಪ ಬೆಳಗಿಸಿ ಉದ್ಘಾಟಿಸಿದರು. ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನ ವೈದ್ಯಾಧಿಕಾರಿ ಡಾ. ಕೆ.ಪಿ. ಸೀತಾರಾಮ್ ಭಟ್‌ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಗೌರವ ಉಪಸ್ಥಿತಿಗಳು:
ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ನಡುತೋಟ, ಅನುಗ್ರಹ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್, ಸಂಚಾಲಕ ಚಂದ್ರಶೇಖರ ನಾಯರ್, ಉಪಾಧ್ಯಕ್ಷ ಶಿವರಾಮ ಏನೆಕಲ್ಲು, ಯಜ್ಞೇಶ್ ಆಚಾರ್, ವಿದ್ಯಾರ್ಥಿ-ಪೋಷಕರ ಸಂಘದ ಪ್ರತಿನಿಧಿ ಭಾರತಿ ದಿನೇಶ್, ಸೊಸೈಟಿ ಅಧ್ಯಕ್ಷ ವೆಂಕಟೇಶ ಎಚ್.ಎಲ್ ಮತ್ತು ಇತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ನಿರ್ವಹಣೆ:
ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿದ್ಯಾರತ್ನ ಸ್ವಾಗತಿಸಿ, ಉಪಾಧ್ಯಕ್ಷ ಶಿವರಾಮ್ ಏನೆಕಲ್ಲು ಪ್ರಸ್ತಾವನೆ ನೀಡಿದರು. ಕಾರ್ಯಕ್ರಮವನ್ನು ಶಿಕ್ಷಕ ಶಶಿಕಾಂತ ನಿರೂಪಿಸಿದರು. ಕೊನೆಯಲ್ಲಿ ಹಿರಿಯ ಶಿಕ್ಷಕ ಉಮೇಶ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

Post a Comment

أحدث أقدم