ಬಂಟ್ವಾಳ, ಜೂನ್ 22 – ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂಗಡಿ ಬಾಗಿಲು ಮುರಿದು ನಗದು ಹಾಗೂ ಬ್ಯಾಂಕ್ ಫಿಕ್ಸ್‌ಡ್ ಡಿಪಾಸಿಟ್ ಬಾಂಡ್ ಕಳವು ಮಾಡಿರುವ ಘಟನೆ ವರದಿಯಾಗಿದೆ.
ಬಿ.ಕಸಬಾ ಗ್ರಾಮಸ್ಥರೇ ಆಗಿರುವ ಕಮಲಾಕ್ಷ (43), ಅಮ್ಟಾಡಿ ಗ್ರಾಮದ ಲೊರೆಟ್ಟೋ ಪದವಿನಲ್ಲಿ ಕಳೆದ 24 ವರ್ಷಗಳಿಂದ ಅಂಗಡಿ ನಡೆಸುತ್ತಿದ್ದರು. ಜೂನ್ 21 ರಂದು ಅವರು ಎಂದಿನಂತೆ ಸಂಜೆ 5:15ಕ್ಕೆ ಅಂಗಡಿ ಬಂದ್ ಮಾಡಿ ಮನೆಗೆ ತೆರಳಿದ್ದರು.
ಮರುದಿನ ಬೆಳಗ್ಗೆ 7:45ರ ವೇಳೆಗೆ ಅವರ ತಮ್ಮ ನವೀನಾಕ್ಷ ಹಾಲು ಹಾಕಲು ಬಂದಾಗ ಅಂಗಡಿಯ ಬೀಗ ಮುರಿದಿರುವುದನ್ನು ನೋಡಿ ಕೂಡಲೇ ಕಮಲಾಕ್ಷರನ್ನು ಸಂಪರ್ಕಿಸಿದರು. ಸ್ಥಳಕ್ಕೆ ಧಾವಿಸಿದ ಪಿರ್ಯಾದಿದಾರರು ಅಂಗಡಿಯ ಬೀಗ ಮುರಿದು, ಒಳಬಾಗದಲ್ಲಿದ್ದ ಡ್ರಾಯರ್‌ನಲ್ಲಿನ ₹65,000 ನಗದು ಮತ್ತು ಕೆನರಾ ಬ್ಯಾಂಕ್‌ನ ಫಿಕ್ಸ್‌ಡ್ ಡಿಪಾಸಿಟ್ ಬಾಂಡ್ ಕಳವಾಗಿರುವುದು ಕಂಡುಬಂದಿದೆ.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.: 69/2025 ರಂತೆ ಭಾರತ ದಂಡ ಸಂಹಿತೆ 2023ರ ಕಲಂಗಳು 331(3), 331(4), 305 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳರ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.
إرسال تعليق