ಬಜತ್ತೂರು, ಜೂನ್ 26 (newspad) – ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪುತ್ತೂರು ತಾಲೂಕಿನ ಬಜತ್ತೂರು ಪ್ರದೇಶದಲ್ಲಿ ಗುಡ್ಡ ಕುಸಿಯುವ ಬಿತಿ ಎದುರಾಗಿದೆ. ಕಾಂಚನದಿಂದ ಬಜತ್ತೂರು ಗ್ರಾಮ ನಡ್ಪ ವಿಷ್ಣುಮೂರ್ತಿ ದೇವಸ್ಥಾನದ ಸಮೀಪದಲ್ಲಿ ಸುಮಾರು 10 ಕಡೆಗಳಲ್ಲಿ ಗುಡ್ಡ ಕುಸಿಯ ಭೀತಿ ನಿರ್ಮಾಣವಾಗಿದೆ.
ಮನೆಗಳ ಹತ್ತಿರ ಹಾಗೂ ರಸ್ತೆ ಬದಿಯಲ್ಲಿ ಮಣ್ಣು ಜಾರಿಕೆ ಉಂಟಾಗಿದ್ದು, ಕೆಲವು ಮರಗಳು ಬೀಳುವ ಹಂತದಲ್ಲಿದೆ, ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಮಣ್ಣಿನ ಸವೆತ ಹಾಗೂ ಗುಡ್ಡ ಜಾರಿಕೆಯ ಪರಿಣಾಮವಾಗಿ ಮಕ್ಕಳ ಶಾಲೆ-ಕಾಲೇಜುಗಳಿಗೆ ಸಾಗಣೆ, ಹಾಲು ಹಾಗೂ ದಿನಸಿಗಳ ವಿತರಣೆಯು ಸಮಸ್ಯೆ ಎದುರಾಗಲಿದೆ.
ಇನ್ನೊಂದು ಮುಖ್ಯ ಸಮಸ್ಯೆ ಅಂದರೆ, ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ವ್ಯತ್ಯಯಗೊಂಡಿದೆ. ವಿದ್ಯುತ್ ಕಂಬಗಳು ಮೇಲೆ ಮರಗಳು ಬೆಳೆದಿದ್ದು ಅದನ್ನು ತೆರವು ಕಾರ್ಯ ನಡೆಯಬೇಕಿದೆ , ಸ್ಥಳೀಯ ನಿವಾಸಿಗಳ ಪ್ರಕಾರ,ಮಳೆಯಿಂದಾಗಿ ರಸ್ತೆ ಸಂಪೂರ್ಣ ಹಾನಿಗೊಂಡಿರುವುದರಿಂದ ಯಾವುದೇ ವಾಹನ ಸಂಚಾರವೂ ಸಾಧ್ಯವಿಲ್ಲ.
ಸ್ಥಳೀಯ ನಿವಾಸಿ ಬಿ.ಎಸ್. ಪ್ರಸಾದ್.ಜಿ ಅವರು ಈ ಕುರಿತು ಅಧಿಕಾರಿಗಳಿಗೆ ಮಾದ್ಯಮ ಮೂಲಕ ಮನವಿ ಸಲ್ಲಿಸಿದ್ದು, ತಕ್ಷಣದ ಪರಿಶೀಲನೆ ಹಾಗೂ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
newspad ದೊಂದಿಗೆ ಮಾತನಾಡಿದ ಸಾರ್ವಜನಿಕರು, " ಅಧಿಕಾರಿಗಳ ತ್ವರಿತ ಸ್ಪಂದನೆ ನೀಡಬೇಕು" ಎಂದು ತಿಳಿಸಿದ್ದಾರೆ.
Post a Comment