ಯಾತ್ರಿಕನೊಬ್ಬ ನದಿಗೆ ಕಸ ಬಿಸಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ಸಹಕಾರದಿಂದ ಕ್ರಮ ಕೈಗೊಳ್ಳಲಾಗಿದೆ.
ಜೂನ್ 9 ರಂದು ಬೆಂಗಳೂರಿನಿಂದ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ಬಂದಿದ್ದ ಯಾತ್ರಾರ್ಥಿಗಳು ಕುಮಾರಧಾರ ನದಿಯ ಸೇತುವೆಯ ಮೇಲಿನಿಂದ ನದಿಗೆ ಕಸ,ತ್ಯಾಜ್ಯ ಸುರಿದ ಘಟನೆ ನಡೆದಿದೆ. ಈ ಕೃತ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದರು. ವಿಡಿಯೋ ವೈರಲ್ ಆದ ನಂತರ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಮ ಪಂಚಾಯತ್ ಅಧಿಕಾರಿಗಳು, ವಾಹನದ ನಂಬರ್ ಆಧರಿಸಿ ಸಂಬಂಧಪಟ್ಟ ಯಾತ್ರಿಕರನ್ನು ಗುರುತಿಸಿ ಸಂಪರ್ಕಿಸಿದ್ದರು.
ಪರಿಣಾಮವಾಗಿ, ಕಸ ಬಿಸಾಡಿದವರಿಂದ ರೂ.1000 ದಂಡ ವಸೂಲಿ ಮಾಡಲಾಗಿದ್ದು, ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಶಿಸ್ತಿನ ದೃಷ್ಠಿಯಿಂದ ಈ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ವಾಹನ ಪತ್ತೆ ಹಚ್ಚುವಲ್ಲಿ ಸುಬ್ರಹ್ಮಣ್ಯ ಠಾಣೆಯ ಎಸ್.ಐ. ಕಾರ್ತಿಕ್ ಅವರು ಪ್ರಮುಖ ಪಾತ್ರವಹಿಸಿದ್ದರೂ, ಪಂಚಾಯತ್ ಸಿಬ್ಬಂದಿ ಕೂಡ ಸಹಕಾರ ನೀಡಿದಿದ್ದಾರೆ.
ಸ್ಥಳೀಯರು ಮತ್ತು ನೆಟ್ಟಿಗರು ಪರಿಸರ ಸಂರಕ್ಷಣೆಗೆ ಈ ರೀತಿಯ ಕಟ್ಟುನಿಟ್ಟಾದ ಕ್ರಮಗಳನ್ನು ಶ್ಲಾಘಿಸುತ್ತಿದ್ದಾರೆ.
إرسال تعليق