ಸುಬ್ರಹ್ಮಣ್ಯ ಜೂನ್ 14 : ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ಸೀನಿಯರ್ ಚೇಂಬರ್ ಇಂದು ರಾಷ್ಟ್ರ ಹಾಗು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದಂತಹ ಸೇವಾ ಕಾರ್ಯಗಳನ್ನು ನಡೆಸುತ್ತಾಬಂದಿದೆ.
ಸಮಾಜದಲ್ಲಿ ನೊಂದವರ ಬಾಳಿಗೆ ಬೆಳಕಾಗಿ, ಆಸಕ್ತರನ್ನು ಗುರುತಿಸಿ ಅವರಿಗೆ ಧನ ಸಹಾಯ ನೀಡುವುದು, ಬಡ ಬಗ್ಗ ರನ್ನ ಗುರುತಿಸಿ ಅವರಿಗೆ ವಿಶೇಷ ಪ್ರೋತ್ಸಾಹ ಅಲ್ಲದೆ ಒಟ್ಟುಗೂಡಿಸಿ ಅವರಿಗೆ ಉತ್ತಮ ನಾಯಕರುಗಳನ್ನಾಗಿ ರೂಪಿಸಿ ಸಮಾಜಕ್ಕೆ ನೀಡುವ ಕೆಲಸವನ್ನು ರಾಷ್ಟ್ರಮಟ್ಟದಲ್ಲಿ ಮಾಡುತ್ತಾ ಬಂದಿದೆ.
ಆ ರೀತಿಯಾಗಿ ಸೀನಿಯರ್ ಚೇಂಬರ್ ನ ಎಲ್ಲಾ ಸದಸ್ಯರುಗಳು ಸಕ್ರಿಯವಾಗಿ ಸಮಾಜ ಸೇವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ಸೀನಿಯರ್ ಚೇಂಬರ್ ರಾಷ್ಟ್ರ ಅಧ್ಯಕ್ಷ ಎಂ.ಆರ್. ಜಯೇಶ್
ಅವರು ಗುರುವಾರ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ನ 2025- 26 ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೆ ಶ್ರೀಸೀನಿಯರ್ ಚೇಂಬರ್ ನ ನ ಅಧ್ಯಕ್ಷ ಡಾl ರವಿ ಕಕ್ಕೆ ಪದವು ವಹಿಸಿದ್ದರು. ಗೌರವ ಅತಿಥಿಯಾಗಿ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಡಾl ಕೇದಿಗೆ ಅರವಿಂದ ರಾವ್ ಸುಬ್ರಮಣ್ಯ ಸೀನಿಯರ್ ಚೇಂಬರ್ನ ಸೇವಾ ಕಾರ್ಯಗಳನ್ನು ಮೆಚ್ಚಿ ಶ್ಲಾಘನೆ ವ್ಯಕ್ತಪಡಿಸಿದರು. ನೂತನ ಅಧ್ಯಕ್ಷರಾಗಿ ಸಾರಥಿಯನ್ನು ವಹಿಸಿಕೊಂಡ ವೆಂಕಟೇಶ ಹೆಚ್.ಎಲ್. ಹಾಗೂ ಅವರ ತಂಡಕ್ಕೆ ರಾಷ್ಟ್ರೀಯ ಉಪಾಧ್ಯಕ್ಷ ಸಿದ್ದಗಂಗಯ್ಯನವರು ಪ್ರಮಾಣವಚನ ಬೋಧಿಸಿದರು.ಇದೇ ಸಂದರ್ಭದಲ್ಲಿ ಸಾಧಕರನ್ನ ಗೌರವಿಸಲಾಯಿತು. ವಿಟಿಯು ನಿವೃತ್ತ ಪ್ರಾದೇಶಿಕ ನಿರ್ದೇಶಕ ಡಾl ಶಿವಕುಮಾರ್ ಹೊಸಳ್ಳಿಕೆ. ಹಾಗೂ ಡಾl ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟಿನ ಸಮಾಜ ಸೇವಕರನ್ನ ಗಣ್ಯರು ಗೌರವಿಸಿದರು. ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ನೂತನವಾಗಿ ಸೇರ್ಪಡೆಗೊಂಡ ರಾಧಾಕೃಷ್ಣ ಕುಳ, ಮಾಧವ ಗೌಡ ಕತ್ಲಡ್ಕ, ಮೋಹನ್ ದಾಸ್ ರೈ ಹಾಗೂ ಜಾನಕಿ ವೆಂಕಟೇಶ್ ಅವರುಗಳನ್ನು ರಾಷ್ಟ್ರ ಅಧ್ಯಕ್ಷರು ಪಿನ್ ನೀಡಿ ಬರಮಾಡಿಕೊಂಡರು. ಸುಬ್ರಹ್ಮಣ್ಯ ಸೀನಿಯರೇಟ್ ಅಧ್ಯಕ್ಷೆ ಲೀಲಾಕುಮಾರಿ ವಿಶ್ವನಾಥ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ವಿಶೇಷ ಆಮಂತ್ರಿಕರಾಗಿ ಸೀನಿಯರ್ ಚೇಂಬರ್ ರಾಷ್ಟ್ರೀಯ ಸಂಯೋಜಕ ಕಿಶೋರ್ ಕರ್ನಾಂಡಿಸ್ ಮಂಗಳೂರು ಸೀನಿಯರ್ ಚೇಂಬರ್ ನ ಅಧ್ಯಕ್ಷ ವಿಕಾಸ್ ಶೆಟ್ಟಿ ಸುಬ್ರಮಣ್ಯ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಜಯಪ್ರಕಾಶ್ ನೂತನ ಅಧ್ಯಕ್ಷರಿಗೆ ಶುಭವನ್ನು ಹಾರೈಸಿದರು. ಸುಬ್ರಮಣ್ಯ ಸೀನಿಯರ್ ಚೇಂಬರ್ನ ಚಂದ್ರಶೇಖರ ನಾಯರ್ ಪ್ರಭಾಕರ ಪಡ್ರ, ಮಾಧವ ದೇವರಗದ್ದೆ, ಲೋಕೇಶ್ ಬಿ ಎನ್, ಪ್ರಕಾಶ್ ಕಟ್ಟೆಮನೆ ಪ್ರಶಾಂತ್ ಕೋಡಿಬೈಲ್ ಅಶೋಕ್ ಮೂಲೆ ಮಜಲು, ಅತಿಥಿ ಗಳನ್ನ ಪರಿಚಯಿಸಿದರು. ಕಾರ್ಯದರ್ಶಿ ಮೋನಪ್ಪ ಡಿ 2025 -26 ನೇ ಸಾಲಿನ ವರದಿ ವಾಚಿಸಿದರು. ಇದೇ ಸಂದರ್ಭದಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಂಜ ವಲಯ ಅರಣ್ಯಾಧಿಕಾರಿ ಹಾಗು ಸಹಾಯಕಾರಕ್ಷಕ ಉಪನಿರೀಕ್ಷ ಕರು ಮತ್ತು ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ನ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ ಎಲ್ಲರನ್ನು ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಗೋಪಾಲ ಎಣ್ಣೆ ಮಜಲು ಧನ್ಯವಾದ ಸಮರ್ಪಿಸಿದರು.
إرسال تعليق