ಹಾಸನ, ಸಕಲೇಶಪುರ, ಚನ್ನರಾಯಪಟ್ಟಣ, ಕುಣಿಗಲ್ ಮುಂತಾದ ಕಡೆಗಳಿಗೆ ತೆರಳುವ ಬಸ್‌ಗಳು ತಡವಾಗಿದ್ದ ಹಿನ್ನೆಲೆಯಲ್ಲಿ, ಸುಬ್ರಹ್ಮಣ್ಯ ಬಸ್ ತಂಗುದಾಣದಲ್ಲಿ ಕೆಲ ಯಾತ್ರಿಕರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಪ್ರಾರಂಭದಲ್ಲಿ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗಾಗಿ ಮಾತ್ರ ಬಸ್ ವ್ಯವಸ್ಥೆ ಮಾಡಲಾಗಿದ್ದರೆಂದು ಆರೋಪಿಸಿ, ಇತರೆ ಕಡೆಗಳಿಗೆ ಬಸ್ ಸೇವೆ ಇಲ್ಲದಿದ್ದ ಹಿನ್ನೆಲೆಯಲ್ಲಿ ಕೆಲವರು ತೀವ್ರ ಅಕ್ರೋಶ ವ್ಯಕ್ತಪಡಿಸಿದರು. ಸಣ್ಣ ಹೊತ್ತಿನಲ್ಲಿ ಭದ್ರತಾ ಬ್ಯಾರಿಕೇಡ್‌ಗಳನ್ನು ರಸ್ತೆಗೆ ಅಡ್ಡ ಇಡುವ ಮೂಲಕ ದಿಗ್ಬಂಧನಕ್ಕೆ ಯತ್ನಿಸಿದರು ಎಂಬ ಮಾಹಿತಿ ಇದೆ.
ಘಟನೆಯ ಬಗ್ಗೆ ಸುಬ್ರಹ್ಮಣ್ಯ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ, ಪೊಲೀಸರು ಸ್ಥಳಕ್ಕೆ ಬಂದು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿದರು. ಅಧಿಕಾರಿಗಳ ಸಾಂತ್ವನದ ಜೊತೆಗೆ ಬಸ್ ವ್ಯವಸ್ಥೆಯ ಬಗ್ಗೆ ಸ್ಪಷ್ಟನೆ ನೀಡಿದ ಬಳಿಕ, ಪ್ರಯಾಣಿಕರು ಸಹಕಾರ ನೀಡಿದರೂ, ಸ್ವಲ್ಪ ಹೊತ್ತು ಬಸ್ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಪ್ರಕಾರ, ಬೆಂಗಳೂರಿಗೆ ಹೋಗಬೇಕಾದ ಒಂದು ಬಸ್ ತಾಂತ್ರಿಕ ತೊಂದರೆಯಿಂದ ಸ್ಥಗಿತಗೊಂಡಿದ್ದರಿಂದ ತಡವಾಯಿತು. ನಂತರ ಸುಳ್ಯ ಡಿಪೋದಿಂದ ಮೆಕಾನಿಕ್‌ರನ್ನು ಕರೆಸಿ ಬಸ್‌ನ್ನು ರಿಪೇರಿ ಮಾಡಿ ಸೇವೆಗೆ ಮರಳಿಸಲಾಯಿತು. ಇತರೆ ಮಾರ್ಗಗಳ ಬಸ್‌ಗಳೂ ಕ್ರಮೇಣ ಕಾರ್ಯನಿರ್ವಹಿಸಲು ತಯಾರಾಗಿದ್ದು, ಪ್ರವಾಸಿಗರ ಪ್ರಯಾಣ ಸುಗಮಗೊಳಿಸಲಾಯಿತು.
إرسال تعليق