ನೆಲ್ಯಾಡಿ ; ಜೂನ್ ,21ರಂದು ಬೆಥನಿ ವಿದ್ಯಾ ಸಂಸ್ಥೆಯ ರಜತ ಮಹೋತ್ಸವ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 2024-25 ನೇ ಸಾಲಿನ ಬೋರ್ಡ್ ಪರೀಕ್ಷೆಯಲ್ಲಿ ಎಸ್. ಎಸ್. ಎಲ್. ಸಿ ಮತ್ತು ಪಿ. ಯು. ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ರಾಂಕ್ ಗಳಿಸಿದ ಮತ್ತು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಬೆಥನಿ ಆಡಳಿತ ಮಂಡಳಿ ಹಾಗೂ ಶಿಕ್ಷಕ-ರಕ್ಷಕ ಸಂಘದ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ರೇ. ಫಾ. ಜೈಸನ್ ಸೈಮನ್ ಓ. ಐ. ಸಿ, ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ರೇ.ಪಾ.ಡಾ.ವರ್ಗಿಸ್ ಕೈಪನಡ್ಕ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಸನ್ನಿ. ಕೆ,ಬೆಥನಿ ವಿದ್ಯಾಸಂಸ್ಥೆ ಯ ಹಳೆ ವಿದ್ಯಾರ್ಥಿ- ವೈದ್ಯರುಗಳಾದ ಡಾ.ಶಮಂತ್ ನೆಲ್ಯಾಡಿ, ಡಾ. ಸುಪ್ರೀತ್ ಲೋಬೊ, ಡಾ. ಅನೀಶ್, ಡಾ. ಅನು, ಉಪಪ್ರಾಂಶುಪಾಲ ಜೋಸ್. ಎಂ. ಜೆ, ಮುಖ್ಯೋಪಾಧ್ಯಾಯರಾದ ಜಾರ್ಜ್ ಕೆ ತೋಮಸ್,ಜೋಸ್ ಪ್ರಕಾಶ್. ಶ್ರೀಮತಿ ಜೆಸ್ಸಿ ಮೊದಲಾದವರು ಪಾಲ್ಗೊಂಡರು.
*ಸಂಸ್ಥೆಯ ಸಾಧನೆಯಲ್ಲಿ ಶಿಕ್ಷಕ ವೃಂದವರ ಪಾಲು ಅಸಾದಾರಣವಾದುದು... ಡಾ. ವರ್ಗಿಸ್ ಕೈಪನಡ್ಕ*
ಸಂಸ್ಥೆಯ ಪ್ರಾಂಶುಪಾಲರಾದ ಡಾ. ವರ್ಗಿಸ್ ಕೈಪನಡ್ಕ ಮಾತನಾಡಿ "ರಾಜ್ಯ ಮಟ್ಟದಲ್ಲಿ 7ಮತ್ತು 8 ನೇ ರಾಂಕ್ ಮಾತ್ರವಲ್ಲ 49ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಯಲ್ಲಿ ಪಾಸಾಗುದರೊಂದಿಗೆ, ಉತ್ತಮ ಫಲಿತಾಂಶ ನೀಡಿ ಇಷ್ಟೊಂದು ಸಾಧನೆಯನ್ನು ಈ ವಿದ್ಯಾಸಂಸ್ಥೆ ಮಾಡುದಕ್ಕೆ ಕಾರಣ ಕರ್ತರಾದ ಎಲ್ಲಾ ಶಿಕ್ಷಕರು ಅಭಿನಂದನಾರ್ಹರು,ಇದಕ್ಕಾಗಿ ಕೇವಲ 10ನೇ ತರಗತಿ ಮಾತ್ರವಲ್ಲ ಕೆ. ಜಿ ತರಗತಿಯ ಶಿಕ್ಷಕರು ಮತ್ತು ಎಲ್ಲಾ ಶಿಕ್ಷಕರನ್ನು ನಾನು ಅಭಿನಂದಿಸುತ್ತೇನೆ ಯಾಕೆಂದರೆ ಅವರು ಅಡಿಪಾಯ ಹಾಕಿ ಕೊಟ್ಟವರು. ಜೊತೆಗೆ ಉತ್ತಮ ಫಲಿತಾಂಶ ತಂದು ಕೊಟ್ಟ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ನಿಮ್ಮ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.
ಅತಿಥಿ ಗಳಾದ ವಿದ್ಯಾ ಸಂಸ್ಥೆಯ ಪೂರ್ವ ವಿದ್ಯಾರ್ಥಿಗಳಾದ ಡಾ. ಅನೀಶ್, ಡಾ. ಅನು, ಡಾ. ಶಮಂತ್, ಡಾ. ಸುಪ್ರೀತ್ ಲೋಬೊ ಮಾತನಾಡಿ ಸಂಸ್ಥೆಯೊಂದಿಗೆ ಬೆಳೆದ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ಶುಭ ಹಾರೈಸಿದರು.
ಸಂಸ್ಥೆಯ ಸಂಚಾಲಕರಾದ ರೇ. ಫಾ. ಜೈಸನ್ ಸೈಮನ್, ಮತ್ತು
ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಸನ್ನಿ ಕೆ ಯವರು ಮಾತನಾಡಿ ಅಧ್ಯಾಪಕವೃಂದ ಮತ್ತು ವಿದ್ಯಾರ್ಥಿಗಳ ಸಾಧನೆ ಯನ್ನು ಶ್ಲಾಘಿಸಿ ಅಭಿನಂದಿಸಿದರು.
ಉಪ ಪ್ರಾಂಶುಪಾಲ ಜೋಸ್ ಎಂ.ಜೆ ಸ್ವಾಗತಿಸಿ, ಮುಖ್ಯ ಶಿಕ್ಷಕ ಜಾರ್ಜ್ ಕೆ ತೋಮಸ್ ಧನ್ಯವಾದ ಸಮಾರ್ಪಿಸಿದರು, ವಿದ್ಯಾರ್ಥಿಗಳಾದ
ಸಲ್ಮಾಮತ್ತು ಎಲಿಜಾ ನಿರೂಪಿಸಿದರು.
*ಸನ್ಮಾನ ಕಾರ್ಯಕ್ರಮ..*
SSLC ಯಲ್ಲಿ 618 ಅಂಕ ಗಳಿಸಿ ರಾಜ್ಯಕ್ಕೆ 7ನೇ ರಾಂಕ್ ಪಡೆದ ವಿದ್ಯಾರ್ಥಿ ವಸಂತ ಬಡೆಕ್ಕರ ಮತ್ತು ಉಪನ್ಯಾಸಕಿ ಮಮತಾರವರ ಪುತ್ರ ಹಿಶಾಂತ್ ಹಾಗೂ 617 ಅಂಕ ಗಳಿಸಿ ರಾಜ್ಯಕ್ಕೆ 8 ನೇ ರಾಂಕ್ ಪಡೆದ ವಿದ್ಯಾರ್ಥಿ ಸಿನಿ ಜಾನ್ಸನ್ ಮತ್ತು ಜಾನ್ಸನ್ ಪುಳಿಕ್ಕಲ್ರವರ ಪುತ್ರ ಜೆಪಿನ್ ರವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ವಿಶಿಷ್ಟ ಶ್ರೇಣಿಯಲ್ಲಿ ಪಾಸದ ಎಲ್ಲಾ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
إرسال تعليق