ನೆಲ್ಯಾಡಿ ಧರ್ಮಪಥ ಯುವಕ ಮಂಡಲದಿಂದ ಸ್ವಚ್ಛತಾ ಶ್ರಮದಾನ ಮತ್ತು ವನಮಹೋತ್ಸವ: ಪರಿಸರ ಸಂರಕ್ಷಣೆಗೆ ನಿದರ್ಶನವಾದ ಜಾಗೃತಿ ಕಾರ್ಯಕ್ರಮ.

ನೆಲ್ಯಾಡಿ:
ಧರ್ಮಪಥ ಯುವಕ ಮಂಡಲದ ಸದಸ್ಯರು ಸಾಮಾಜಿಕ ಜವಾಬ್ದಾರಿಯ ಕುರಿತು ಚಿಂತಿಸಿ ಶ್ರದ್ಧೆಯಿಂದ ಶ್ರಮದಾನ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಸ್ಥಳೀಯ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದೊಂದಿಗೆ, ನೆಲ್ಯಾಡಿಯ ರಾಷ್ಟ್ರೀಯ ಹೆದ್ದಾರಿ -75ರ ಪಕ್ಕದಲ್ಲಿ ಪ್ರಕೃತಿ ಅಬಿವೃದ್ಧಿ  ಪಡಿಸುವ ಉದ್ದೇಶದಿಂದ ನೂರಾರು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಬಲಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಪಾಲ್ಗೊಂಡ ಯುವಕರು:
ನರೇಂದ್ರ, ತಿಲಕ್ ರಾಜ್, ಸಂಕೇತ್, ಪ್ರೀತಮ್, ಆಧೀಷ್, ಯಶ್ವಿತ್, ಅಧೀಷ್, ಶ್ಯಾಮ್ ಶೌರಿ, ಚೇತನ್ ಅವರು ಶ್ರಮದಾನದ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಿದರು.
ಅವರೊಂದಿಗೆ ಪುರುಷೋತ್ತಮ ಶೆಟ್ಟಿ ಕೊಲ್ಯೊಟ್ಟು, ಸುಧೀರ್ ಕುಮಾರ್, ಉದಯ್ ಕುಮಾರ್, ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಹಕರಿಸಿದರು.

ಈ ಕಾರ್ಯದ ಮೂಲಕ ಮಕ್ಕಳು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡುವ ಕಾರ್ಯ ಮಾಡಿದ್ದಾರೆ. ಇದೊಂದು ಮಾದರಿ ಕಾರ್ಯವಾಗಿ ಗುರುತಿಸಲ್ಪಡುತ್ತಿದ್ದು, ಇಂತಹ ಚಟುವಟಿಕೆಗಳು ಹೆಚ್ಚು ನಡೆಯಲಿ ಎಂಬ ಆಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post