ಸುಬ್ರಹ್ಮಣ್ಯ ಜೂನ್ 29 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಹಾಗೂ ಡಾ. ರವಿ ಕಕ್ಕೆ ಪದವ ಸಮಾಜ ಸೇವ ಟ್ರಸ್ಟ್ ಪ್ರತಿ ರವಿವಾರ ನಿರಂತರವಾಗಿ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಈ ದಿನ ನಡೆದ ಸ್ವಚ್ಛತಾ ಅಭಿಯಾನದಲ್ಲಿ ರವಿ ಕಕ್ಕೆ ಪದವ ಸಮಾಜ ಸೇವ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ನ ಸುಮಾರು ಮೂವತ್ತಕ್ಕೂ ಮಿಕ್ಕಿ ಸ್ವಯಂಸೇವಕರು ಕುಮಾರಧಾರ ಸೇತುವೆಯ ಮೇಲೆ ಇದ್ದಂತಹ ಕಸ ಕಡ್ಡಿಗಳು,ಮಣ್ಣು, ತರೆಗೆರೆಗಳು, ಹಾಗೂ ಕೊಚ್ಚೆ ವಸ್ತುಗಳನ್ನ ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ಅದರೊಂದಿಗೆ ಕುಮಾರಧಾರ ಸ್ಥಾನಗಟ್ಟ ಪರಿಸರದಲ್ಲಿಯೂ ಕೂಡ ಇದ್ದ ಕಸ ಕಡ್ಡಿಗಳು ಪ್ಲಾಸ್ಟಿಕ್ ಚೀಲಗಳು ಪ್ಲಾಸ್ಟಿಕ್ ಬಾಟಲುಗಳು ಹಾಗೂ ಕೊಚ್ಚ ವಸ್ತುಗಳನ್ನ ತೆರವುಗೊಳಿಸಿರುವರು. ಈ ಸಂದರ್ಭದಲ್ಲಿ ಮಾತನಾಡಿದ ಸುಬ್ರಹ್ಮಣ್ಯ ಕುಕ್ಕೆಶ್ರೀ ಸೀನಿಯರ್ ಚೇಂಬರ್ ನ ಅಧ್ಯಕ್ಷ ವೆಂಕಟೇಶ ಎಚ್ ಎಲ್ ಮಾತನಾಡುತ್ತಾ" ಕುಕ್ಕೆ ಸುಬ್ರಹ್ಮಣ್ಯ ಪವಿತ್ರ ಕ್ಷೇತ್ರಕ್ಕೆ ದೇಶಾದ್ಯಂತ ಸಾವಿರಾರು ಭಕ್ತಾದಿಗಳು ದಿನಂಪ್ರತಿ ಆಗಮಿಸುವ ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಸ್ವಚ್ಛತೆಗೆ ವಿಶೇಷವಾದ ಗಮನವನ್ನು ಹರಿಸಲೇಬೇಕು. ಕ್ಷೇತ್ರದ ಎಲ್ಲಾ ಕಡೆ ಸ್ವಚ್ಛ ಇದ್ದಲ್ಲಿ ಭಕ್ತಾದಿಗಳಿಗೆ ಸ್ವಚ್ಛ ಮನಸ್ಸಿನೊಂದಿಗೆ ದೇವರ ಸಾನಿಧ್ಯದಲ್ಲಿ ದೇವರ ದರ್ಶನವನ್ನು ಮಾಡಿ ಸಂಪ್ರೀತಿಗೊಳ್ಳುತ್ತಾರೆ" ಎಂದವರು ತಿಳಿಸಿದರು. ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟಿನ ಸಂಸ್ಥಾಪಕ ಡಾ. ರವಿ ಕಕ್ಕೆ ಪದವು, ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಕಾರ್ಯದರ್ಶಿ ಗೋಪಾಲ ಎಣ್ಣೆ ಮಜಲ್, ಸಮಾಜ ಸೇವಾ ಟ್ರಸ್ಟ್ ನ ಸ್ವಯಂಸೇವಕರು ಭಾಗವಹಿಸಿದ್ದರು ಶ್ರೀಮತಿ ಗೀತಾ ರವಿ ಕಕ್ಕೆ ಪದವು ಅವರಿಂದ ಎಲ್ಲಾ ಸ್ವಯಂಸೇವಕರಿಗೆ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.
ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ವಿಶೇಷ ಸೂಚನೆ : ದೇಶಾದ್ಯಂತ ಹಾಗೂ ದೂರ ದೂರಗಳಿಂದ ಬರುವ ಭಕ್ತಾದಿಗಳು ಕ್ಷೇತ್ರ ಸಂದರ್ಶಿಸುವ ಸಮಯದಲ್ಲಿ ತಮ್ಮ ಬ್ಯಾಗುಗಳಲ್ಲಿ ಯಾವುದೇ ಪ್ಲಾಸ್ಟಿಕ್ ಬಾಟ್ಲುಗಳು ಪ್ಲಾಸ್ಟಿಕ್ ವಸ್ತುಗಳನ್ನ ತರಬೇಡಿ ಹಾಗೆ ಒಂದು ವೇಳೆ ತಂದಲ್ಲಿ ಅದೆಲ್ಲವನ್ನ ತಮ್ಮ ವಾಹನದಲ್ಲಿಯೇ ಇಟ್ಟು ವಾಪಸ್ ಊರಿಗೆ ಕೊಂಡು ಹೋಗಬೇಕಾಗಿ ವಿನಂತಿ.
Post a Comment