🛕 ಪಂಜ ಸೀಮೆಯ ಶ್ರೀ ಕಾಚು ಕುಜು೦ಬ ದೈವಸ್ಥಾನದ ಜೀರ್ಣೋಧಾರ ಸಮಿತಿ ನೇಮಕ – ನೂತನ ದೇವಾಲಯ ನಿರ್ಮಾಣ ಕಾರ್ಯ ಪ್ರಾರಂಭ.

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬಲಕ್ಯೆ ಬಂಟ ಶ್ರೀ ಕಾಚು ಕುಜು೦ಬ ದೈವದ ಮೂಲ ಸ್ಥಾನ ಗರಡಿ ಬೈಲ್ ಎಂಬಲ್ಲಿ ನೂತನವಾಗಿ ಶ್ರೀ ಕಾಚು ಕುಜು೦ಬ ದೈವಸ್ಥಾನ ನಿರ್ಮಾಣ ಕಾರ್ಯ ಜೋರಾಗಿ ನಡೆಯುತ್ತಿದೆ.

ಈ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ
 ಅಧ್ಯಕ್ಷರಾಗಿ ಶ್ರೀ ಪರಮೇಶ್ವರ ಗೌಡ ಬಿಳಿಮಲೆ,
 ಉಪಾಧ್ಯಕ್ಷರಾಗಿ ಶ್ರೀ ಉಮೇಶ್ ಬುಡೆಂಗಿ ಬಲ್ಪ, 
ಕಾರ್ಯದರ್ಶಿಯಾಗಿ ಶ್ರೀ ಅನಂದ ಗೌಡ ಜಳಕದ ಹೊಳೆ ಅವರು ಏಕಮತದಿಂದ ಆಯ್ಕೆಯಾಗಿದ್ದಾರೆ.

ಸಭೆಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತೂರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಮಿತಿಯ ಗೌರವ ಸಲಹೆಗಾರರಾದ ಶ್ರೀ ಮಹೇಶ್ ಕುಮಾರ್ ಕರಿಕ್ಕಳ, ಆನಂದ ಗೌಡ ಕಂಬಳ, ಸದಸ್ಯರಾದ ರಾಮಚಂದ್ರ ಭಟ್, ಮಾಲಪ್ಪ ಗೌಡ ಯೆಣ್ಮೂರು, ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಗೌಡ ಮರಕಡ, ಸಂತೋಷ್ ಕುಮಾರ್ ರೈ ಫಲತಡ್ಕ, ಸತ್ಯನಾರಾಯಣ ಭಟ್ ಕಾಯಂಬಾಡಿ, ಮಾಲಿನಿ ಕುದ್ವ, ಮತ್ತು ಪವಿತ್ರ ಮಲ್ಲೆಟ್ಟಿ ಉಪಸ್ಥಿತರಿದ್ದರು.

ದೈವಸ್ಥಾನದ ನಿರ್ಮಾಣ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು, ಪ್ರತಿಷ್ಠಾ ಮಹೋತ್ಸವವು ಡಿಸೆಂಬರ್ 3 ರಿಂದ 5, 2025 ರವರೆಗೆ ನಡೆಯಲಿದೆ ಎಂದು ಡಾ. ದೇವಿಪ್ರಸಾದ್ ಕಾನತೂರ್ ತಿಳಿಸಿದ್ದಾರೆ.

Post a Comment

أحدث أقدم