ಪಂಜ:ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬಲಕೈ ಬಂಟ ಕಾಚುಕುಜುಂಬ ದೈವದ ಮೂಲಸ್ಥಾನ – ಗರಡಿ ಬೈಲು –ದಲ್ಲಿ ನಿರ್ಮಾಣವಾಗುತ್ತಿರುವ ನೂತನ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದೆ. ಜೂನ್ 29 ರಂದು ದೈವಸ್ಥಾನದ ಅಡಿಪಾಯಕ್ಕೆ ಕಾಂಕ್ರಿಟೀಕರಣ ಶ್ರಮದಾನ ಮೂಲಕ ಕಾರ್ಯಾರಂಭವಾಯಿತು.
ಈ ಶ್ರಮದಾನ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು. ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪರಮೇಶ್ವರ ಬಿಳಿಮಲೆ, ಉಪಾಧ್ಯಕ್ಷ ಉಮೇಶ್ ಬುಡೆಂಗಿ, ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ವ, ಪಂಬೆತ್ತಾಡಿ ಚಿಗುರು ಗೆಳೆಯರ ಬಳಗದ ಅಧ್ಯಕ್ಷ ಅಶ್ವಥ್ ಬಾಬ್ಲುಬೆಟ್ಟು, ವ್ಯವಸ್ಥಾಪನಾ ಸಮಿತಿ ಸದಸ್ಯರು ಸಂತೋಷ್ ರೈ ಪಲ್ಲತ್ತಡ್ಕ, ಧರ್ಮಣ್ಣ ನಾಯ್ಕ ಗರಡಿ, ಪವಿತ್ರ ಮಲ್ಲೆಟ್ಟಿ, ಮಾಲಿನಿ ಕುದ್ವ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು ರಜಿತ್ ಭಟ್ ಪಂಜಬೀಡು, ದಿನೇಶ್ ಗರಡಿ, ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು, ಹಾಗೂ ರಾಜೇಶ್ ಕುದ್ವ ಸೇರಿದಂತೆ ಹಲವು ಭಕ್ತರು ಮತ್ತು ಗ್ರಾಮಸ್ಥರು ಶ್ರಮದಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಈ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯವು ಭಕ್ತರ ಶ್ರದ್ಧಾ, ಸಹಕಾರ, ಹಾಗೂ ಸಂಯುಕ್ತ ಶ್ರಮದ ಪ್ರತೀಕವಾಗಿದ್ದು, ಭವಿಷ್ಯದಲ್ಲಿ ದೈವಸ್ಥಾನವು ಭಕ್ತರ ಆಧ್ಯಾತ್ಮಿಕ ಕೇಂದ್ರವಾಗಲಿದೆ ಎಂಬ ನಂಬಿಕೆಯಿದೆ.
Post a Comment