📰 ಜೈನ ಧರ್ಮದ ಸ್ವಾಮೀಜಿಗೆ ಅವಮಾನಕಾರಕ ಕಾಮೆಂಟ್: ಪುತ್ತೂರು ಪೊಲೀಸರಿಂದ ಪ್ರಕರಣ ದಾಖಲು.

ಪುತ್ತೂರು, ಜೂನ್ 29:
ಪಡ್ನೂರು ಗ್ರಾಮದ ನಿವಾಸಿ ಜೀವಂದರ್ ಜೈನ್ (60) ಎಂಬವರು ನೀಡಿದ ದೂರಿನಂತೆ, ಸಾಮಾಜಿಕ ಜಾಲತಾಣ ಪೇಸ್‌ಬುಕ್‌ನಲ್ಲಿ ಜೈನ ಧರ್ಮದ ಸ್ವಾಮೀಜಿಗೆ ಮತ್ತು ದೇಶದ ಗೌರವಾನ್ವಿತ ಪ್ರಧಾನಮಂತ್ರಿಯವರಿಗೆ ಅವಮಾನ ಮಾಡುವ ರೀತಿಯ ಕಾಮೆಂಟ್‌ ಅನ್ನು ಬರೆದು ಸಾರ್ವಜನಿಕ ಶಾಂತಿಗೆ ಧಕ್ಕೆಯನ್ನುಂಟುಮಾಡುವ ಘಟನೆ ನಡೆದಿದೆ.
"ಕರುನಾಡಿನ ಮಿನುಗುವ ನಕ್ಷತ್ರ" ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಫೇಸ್‌ಬುಕ್ ಪುಟದ ಒಬ್ಬ ಬಳಕೆದಾರನು ಈ ಅಪರಾಧ ಮಾಡಿದರೆಂದು ಆರೋಪಿಸಲಾಗಿದೆ. ಈ ವ್ಯಕ್ತಿ ಒಂದು ಪೋಸ್ಟ್‌ಗೆ ಪ್ರತಿಕ್ರಿಯೆ ನೀಡುವ ಸಂದರ್ಭ, ಧಾರ್ಮಿಕ ಗೌರವಕ್ಕೆ ಮತ್ತು ರಾಷ್ಟ್ರೀಯ ನಾಯಕರ ಮೌಲ್ಯಕ್ಕೆ ಧಕ್ಕೆಯಾಗುವಂತಹ ಅಸಭ್ಯ ಭಾಷೆ ಬಳಸಿ ಕಮೆಂಟ್ ಮಾಡಿದ್ದಾನೆ.

ಈ ಕುರಿತು ಜೀವಂದರ್ ಜೈನ್ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ, ಪ್ರಕರಣ ಸಂಖ್ಯೆ 50/2025 ಅಡಿಯಲ್ಲಿ ಭಾರತೀಯ ದಂಡ ಸಂಹಿತೆ BNS 2023ರ ಕಲಂ 196(1)(a), 353(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

ಪುತ್ತೂರು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಅಸಭ್ಯ ಕೃತ್ಯಗಳನ್ನು ಶಿಸ್ತುಮೂಲಕ ನಿಯಂತ್ರಣಕ್ಕೆ ತರಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Post a Comment

Previous Post Next Post