ಮಂಗಳೂರು: 5.7 ಕೆ.ಜಿ ಗಾಂಜಾ ವಶ; 5 ಮಂದಿ ಯುವಕರು ಸೆರೆ – ಸೆನ್ ಕ್ರೈಂ ಠಾಣೆಯ ದಾಳಿ ಯಶಸ್ವಿ.

ಮಂಗಳೂರು, ಜುಲೈ 3: ನಗರದ ಪಡುಶೆಡ್ಡೆ ಗ್ರಾಮದಲ್ಲಿ ಮಾದಕ ವಸ್ತು ಮಾರಾಟಕ್ಕೆ ಮುಂದಾಗಿದ್ದ ಐದು ಮಂದಿಯ ಬಳಿಯಿಂದ ರೂ. 5.20 ಲಕ್ಷ ಮೌಲ್ಯದ ಗಾಂಜಾವನ್ನು ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.



ದಿನಾಂಕ 02-07-2025 ರಂದು ಬಂದ ಖಚಿತ ಮಾಹಿತಿಯ ಮೇರೆಗೆ, ಪಡುಶೆಡ್ಡೆಯ ಹಾಲಾಡಿ ಎಂಬ ಸ್ಥಳದಲ್ಲಿ ದಾಳಿ ನಡೆಸಿದ ಪೊಲೀಸರು, ಆರೋಪಿತರನ್ನು ಸಕಾಲದಲ್ಲಿ ಬಂಧಿಸಿದ್ದಾರೆ. ವಶಪಡಿಸದ ಮಾದಕ ವಸ್ತುಗಳು 5.759 ಕೆ.ಜಿ ತೂಕದ ಗಾಂಜಾ ಸೇರಿದಂತೆ ಚಿಕ್ಕ ಪ್ಯಾಕೆಟ್ ಗಳು, 6 ಮೊಬೈಲ್ ಫೋನ್ ಹಾಗೂ ಒಂದು ದ್ವಿಚಕ್ರ ವಾಹನವನ್ನೂ ಒಳಗೊಂಡಿದೆ.

ಬಂಧಿತ ಆರೋಪಿತರು:
1. ತುಷಾರ್ @ ಸೋನು (21) – ಅಡು ಮರೋಳಿ, ಬಿಕರ್ನಕಟ್ಟೆ

2. ಧನ್ವಿ ಶೆಟ್ಟಿ (20) – ನಾಗುರಿ

3. ಸಾಗರ್ ಕರ್ಕೇರಾ (19) – ಜಲ್ಲಿಗುಡ್ಡೆ

4. ವಿಕಾಸ್ ಥಾಪ @ ಪುಚ್ಚಿ (23) – ಶಕ್ತಿನಗರ

5. ವಿಘ್ನೇಶ್ ಕಾಮತ್ (24) – ಅಳಕೆ, ಕಂಡೆಟ್ಟು

ಪೊಲೀಸರು ದಾಖಲಿಸಿರುವ ಎಫ್‌ಐಆರ್ ಸಂಖ್ಯೆ 31/2025 ಆಗಿದ್ದು, ಆರೋಪಿತರಿಗೆ ವಿರುದ್ಧ NDPS ಕಾಯ್ದೆಯ ಸೆಕ್ಷನ್ 8(c), 20(b)(ii)(B) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿದ್ಯಾರ್ಥಿಗಳಿಗೂ ಮಾರಾಟ:
ಆರೋಪಿತರು ಗಾಂಜಾವನ್ನು ರೂ.1000ಕ್ಕೆ ಚಿಕ್ಕ ಪ್ಯಾಕೆಟ್ ಗಳಾಗಿ ವಿದ್ಯಾರ್ಥಿಗಳಿಗೂ ಮಾರಾಟ ಮಾಡುತ್ತಿದ್ದ ಮಾಹಿತಿ ದೊರಕಿದೆ. ಆರೋಪಿತರು ಮಂಗಳೂರು ನಗರದಲ್ಲೇ ಪೆಡ್ಲರ್ ಆಗಿ ಕ್ರಿಯಾಶೀಲರಾಗಿದ್ದರು ಎನ್ನಲಾಗಿದೆ. ತನಿಖೆ ಮುಂದುವರೆದಿದ್ದು, ಗಾಂಜಾ ಪೂರೈಕೆದಾರರ ಕುರಿತು ಶೀಘ್ರದಲ್ಲಿ ಮಾಹಿತಿ ಬಯಲಾಗುವ ಸಾಧ್ಯತೆ ಇದೆ.

ಪೊಲೀಸರ ಕಾರ್ಯಾಚರಣೆಗೆ ಶ್ಲಾಘನೆ:
ಈ ಪತ್ತೆ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಪೊಲೀಸ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಡಿಯಲ್ಲಿ ಸೆನ್ ಕ್ರೈಂ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಮುಖ ಪಾತ್ರವಹಿಸಿದ್ದರು.

Post a Comment

أحدث أقدم