ತಲೆಮರೆಸಿದ್ದ ಆರೋಪಿಯನ್ನು ಮಂಜೇಶ್ವರದಿಂದ ಬಂಧಿಸಿ ಕರೆತಂದ ಬಂಟ್ವಾಳ ಪೊಲೀಸರು : ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಲಯ


ಬಂಟ್ವಾಳ, ಜುಲೈ 10:
2007ರಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ:139/2007 ಕಲಂ 366, 420, 120ಬಿ, 368 ಹಾಗೂ 149 ಐ.ಪಿ.ಸಿ ಅಡಿ ದಾಖಲಾದ ಪ್ರಕರಣದ ಆರೋಪಿ ಬಂಟ್ವಾಳ ತಾಲ್ಲೂಕಿನ ಮಂಚಿ ನಿವಾಸಿ ಹಿದಾಯತ್ @ ಅಬ್ದುಲ್ಲ ಎಂಭಾತ್, ಕಳೆದ ಡಿಸೆಂಬರ್-2023ರಿಂದ ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು.


ಬಂಟ್ವಾಳ ನಗರ ಪೊಲೀಸರು ಆರೋಪಿ ಹಿದಾಯತ್ ಅನ್ನು ಈ ದಿನಾಂಕ 10.07.2025ರಂದು ಕೇರಳದ ಮಂಜೇಶ್ವರದಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಂತರ ಮಾನ್ಯ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ವಿಚಾರಣೆಗೆ ಹಾಜರಾಗದಿರುವ ಹಿನ್ನಲೆಯಲ್ಲಿ, ಆರೋಪಿ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಅ.ಕ್ರ: 74/2025 ಕಲಂ: 269 ಬಿ.ಎನ್.ಎಸ್ ಅಡಿ ಮತ್ತೊಂದು ಪ್ರಕರಣವನ್ನು ದಾಖಲಿಸಲಾಗಿದೆ.

ಪೊಲೀಸರು ಆರೋಪಿ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Post a Comment

أحدث أقدم