ಬಿಳಿನೆಲೆಯಲ್ಲಿ ಅಂಬುಲೆನ್ಸ್ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ


ಸುಬ್ರಹ್ಮಣ್ಯ ರೋಡ್ ನೆಟ್ಟಣ ಟ್ಯಾಕ್ಸಿ ಚಾಲಕ, ಮಾಲೀಕರ ಸಂಘದ ವತಿಯಿಂದ ನೀಡಲಾದ ಅಂಬುಲೆನ್ಸ್ ಸೇವೆ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಳ್ಳಿತು. ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲೂ ಆಯೋಜನೆ ಮಾಡಲಾಗಿತ್ತು.


ಅಂಬುಲೆನ್ಸ್ ಲೋಕಾರ್ಪಣೆ ನಡೆಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡುತ್ತಾ, 


"ಯಾತ್ರಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅಗತ್ಯ  ಸಂದರ್ಭದಲ್ಲಿ ಸೇವೆ ನೀಡಲು ಟ್ಯಾಕ್ಸಿ ಚಾಲಕರ ಸಂಘ ಅಂಬುಲೆನ್ಸ್ ನೀಡಿದ್ದು, ಜನ ಜೀವ ಉಳಿಸುವಂತಹ ಪುಣ್ಯದ ಕೆಲಸವಾಗಿದೆ. ಇಂತಹ ಸಮಾಜಮುಖಿ ಕಾರ್ಯ ಇತರರಿಗೆ ಮಾದರಿಯಾಗಿದೆ" ಎಂದರು. ಅವರು ಮುಕ್ತ ಬಸ್ ಪ್ರಯಾಣದಿಂದ ತೊಂದರೆ ಅನುಭವಿಸುತ್ತಿರುವ ಟ್ಯಾಕ್ಸಿ ಮತ್ತು ಅಟೋ ಚಾಲಕರ ಪರಿಸ್ಥಿತಿಯನ್ನು ಉಲ್ಲೇಖಿಸಿ, "ಉಳ್ಳವರು ಟ್ಯಾಕ್ಸಿ ಪ್ರಯಾಣ ಮಾಡಿ ಆರ್ಥಿಕ ಸಹಾಯ ಮಾಡಬೇಕು" ಎಂದು ಸಲಹೆ ನೀಡಿದರು.

ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ದಿನೇಶ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ರೈಲ್ವೇ ಸ್ಟೇಷನ್ ಮ್ಯಾನೇಜರ್ ಸಂಜೀವ್ ರಂಜನ್, ದ.ಕ ಟ್ಯಾಕ್ಸಿಮ್ಯಾನ್ ಅಸೋಸಿಯೇಶನ್ ಅಧ್ಯಕ್ಷ ಆನಂದ ಗೌಡ, ಕಾನೂನು ಸಲಹೆಗಾರ ಚೇತನ್ ಕುಮಾರ್, ಕೆಟಿಡಿಸಿ ಕಾರ್ಯದರ್ಶಿ ಇಕ್ಬಾಲ್ ಬಿಸಿರೋಡ್ ಹಾಗೂ ಹಲವರು ಶುಭಾಶಯಗಳನ್ನು ಹೇಳಿದರು.

ಸಂಘದ ಅಧ್ಯಕ್ಷ ಕಿಶೋರ್ ಕುಮಾರ್ ಎಚ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಕಳಿಗೆ, ಉಪಾಧ್ಯಕ್ಷ ಜಯಂತ್ ಆರ್ಲಡ್ಕ, ಸ್ಥಳೀಯ ಮುಖಂಡ ಸತೀಶ್ ಕಳಿಗೆ ಸಹಿತ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣವೂ ನಡೆಯಿತು. ಕಾರ್ಯದರ್ಶಿ ನಾಗೇಶ್ ಬೈಲು ಸ್ವಾಗತಿಸಿ ವರದಿ ವಾಚಿಸಿದರು. ಪ್ರದೀಪ್ ಸಿ.ಟಿ. ವಂದಿಸಿದರು. ಪ್ರಿಯಾ ಕುಮಾರಿ ಮತ್ತು ದೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.

Post a Comment

أحدث أقدم