ಭಾರಿ ಗಾಳಿ ಮಳೆಗೆ ಮನೆ ಹಾನಿ: ಸಿರಿಬಾಗಿಲು ಗ್ರಾಮದಲ್ಲಿ ಅಡಿಕೆ ಮರ ಬಿದ್ದು ಮನೆ ನಷ್ಟ.

ಗುಂಡ್ಯ, ಜುಲೈ 26:ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ಅನಿಲ ಸುಮಿತ್ರ ಅವರ ಮನೆಗೆ ನಿನ್ನೆ ಸಂಜೆ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಅಪಾರ ನಷ್ಟ ಸಂಭವಿಸಿದೆ. ಗಾಳಿಗೆ ಅಡಿಕೆ ಮರ ಬಿದ್ದು ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ. ಜೊತೆಗೆ ಮನೆಯ ಕೊಟ್ಟಿಗೆಯ ಶೀಟ್‌ಗಳು ಹಾರಿ ಹೋಗಿದ್ದು, ಮನೆಗೆ ಪ್ರಮುಖ ಹಾನಿ ಉಂಟಾಗಿದೆ.

ಸ್ಥಳಕ್ಕೆ ಗ್ರಾಮ ಲೆಕ್ಕಿಗರಾದ ಸಂತೋಷ್ ಅವರು ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಸಂಬಂಧಿತ ಇಲಾಖೆಗಳಿಗೆ ವರದಿ ಸಲ್ಲಿಸಿ ಪರಿಹಾರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಸ್ಥಳೀಯರ ಸಹಕಾರದಿಂದ ತಾತ್ಕಾಲಿಕವಾಗಿ ಮನೆಯ ದುರಸ್ತಿ ಕಾರ್ಯ ಆರಂಭಿಸಲಾಗಿದೆ. 

Post a Comment

Previous Post Next Post