ಪ್ರಧಾನ ಮಂತ್ರಿಗಳ ಮನ್ ಕೀ ಬಾತ್ ಕಾರ್ಯಕ್ರಮದ ವೀಕ್ಷಣೆ: ಸುಳ್ಯ ಮಂಡಲದ ಬಿಜೆಪಿ ನಾಯಕರು ಭಾಗವಹಿಸಿದ ಮಹತ್ವದ ಕ್ಷಣ.

ಸುಳ್ಯ:ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ 124ನೇ ಸಂಚಿಕೆಯ ಮನ್ ಕೀ ಬಾತ್ ಕಾರ್ಯಕ್ರಮವನ್ನು ಸುಳ್ಯ ಮಂಡಲದ ಕಡಬ ಮಹಾಶಕ್ತಿಕೇಂದ್ರದ ಬೂತ್ ಸಂಖ್ಯೆ 98 ರ ದೇವಪ್ಪ ಕುಂಬಾರ ಅವರ ನಿವಾಸದಲ್ಲಿ ಭಾನುವಾರದಂದು ಆಕರ್ಷಕವಾಗಿ ವೀಕ್ಷಿಸಲಾಯಿತು.

ಈ ವಿಶೇಷ ಕಾರ್ಯಕ್ರಮದಲ್ಲಿ ಮಾನ್ಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ, ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಲಳಂಬೆ, ಹಾಗೂ ಪಕ್ಷದ ಹಿರಿಯ ನಾಯಕರು, ವಿವಿಧ ಘಟಕಗಳ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿಸಿದರು.

ಮನ್ ಕೀ ಬಾತ್ ಕಾರ್ಯಕ್ರಮದ ಸಂದರ್ಭ, ಪ್ರಧಾನ ಮಂತ್ರಿಯವರು ರಾಷ್ಟ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಪ್ರಸ್ತಾಪಿಸಿದ ವಿಚಾರಗಳು ಕಾರ್ಯಕರ್ತರಲ್ಲಿ ನವ ಚೈತನ್ಯ ತುಂಬಿದವು. ಗ್ರಾಮೀಣ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಜವಾಬ್ದಾರಿತನದಿಂದ ವೀಕ್ಷಿಸಿರುವುದು ಬಿಜೆಪಿಯ ಸಂಘಟನೆಯ ಬಲವರ್ಧನೆಗೆ ದಾರಿ ಹರೆಯುತ್ತಿದೆ.

ಕಾರ್ಯಕ್ರಮದ ಅಂತ್ಯದಲ್ಲಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಯಿದ್ದು, ಪ್ರಧಾನಿ ಮಾತುಗಳು ಪ್ರೇರಣೆಯಾಗಿ ಪರಿಣಮಿಸುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

Post a Comment

Previous Post Next Post