ಕುಕ್ಕೆ ಸುಬ್ರಹ್ಮಣ್ಯ ವೀಲ್‌ಚೇರ್ ದಾನ ಮಾಡಿ ಶ್ರೀ ದೇವರಿಗೆ ಸೇವೆ ಸಲ್ಲಿಸಿದ ಭಕ್ತರು– ದೇವಸ್ಥಾನದಲ್ಲಿ ಕೃತಜ್ಞತೆ.


ಕುಕ್ಕೆ ಸುಬ್ರಹ್ಮಣ್ಯ, ಜುಲೈ 16:
ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಆಗಮಿಸುವ ವಿಕಲಚೇತನ ಭಕ್ತಾಧಿಗಳ ಅನುಕೂಲಕ್ಕಾಗಿ,ಬೆಂಗಳೂರು ನಿವಾಸಿಗಳಾದ ಭಕ್ತರು ಜಗನ್ ಮತ್ತು ಪ್ರಮೋದ್ ಅವರು  ವೀಲ್‌ಚೇರ್‌ ಅನ್ನು ದಾನವಾಗಿ ನೀಡಿದ್ದಾರೆ.

ಈ ಸೇವೆಯನ್ನು ದೇವಳದ ಆಡಳಿತ ಮಂಡಳಿ ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿದ್ದು, ಭಕ್ತ ದಾನಿ ಗಳಿಗೆ ಶ್ರೀ ದೇವರ ಪ್ರಸಾದ ನೀಡಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭ ದೇವಳದ ಶಿಷ್ಟಾಚಾರ ವಿಭಾಗದ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಕುಕ್ಕೆ ಸುಬ್ರಹ್ಮಣ್ಯ ದೇವಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀ ಹರೀಶ್ ಇಂಜಾಡಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.
“ದೇವಳಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಅವರಲ್ಲಿ ಕೆಲವರು ಅಂಗವಿಕಲರು, ಹಿರಿಯರು. ಇಂತಹ ಭಕ್ತರಿಗೆ ಸಹಾಯವಾಗುವ ವಸ್ತುಗಳ ದಾನ ಶ್ರೀ ದೇವರ ಸೇವೆ. ಬೆಂಗಳೂರು ನಿವಾಸಿಗಳಾದ 
ಶ್ರೀ ದೇವರ ಭಕ್ತರು ಜಗನ್ ಹಾಗೂ ಪ್ರಮೋದ್ ಅವರ ಸಮಾಜಮುಖಿ ಚಿಂತನೆಗೆ ದೇವಳದ ಆಡಳಿತ ಮನಃಪೂರ್ವಕ ಅಭಿನಂದನೆ ಸಲ್ಲಿಸುತ್ತದೆ,” ಎಂದು ಹೇಳಿದರು.

Post a Comment

أحدث أقدم