ಕುಕ್ಕೆ ಸುಬ್ರಹ್ಮಣ್ಯ: ಅಷ್ಠಮಿ ಉತ್ಸವ ಸಮಿತಿಗೆ ನೂತನ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಮಾನಾಡು ಆಯ್ಕೆ.

ಸುಬ್ರಹ್ಮಣ್ಯ: ಜುಲೈ,17;ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಉತ್ಸವ ಸಮಿತಿ ಸುಬ್ರಹ್ಮಣ್ಯ ಇದರ ಮಹಾಸಭೆ ಸಮಿತಿಯ ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯ ವಾರ್ಷಿಕ ಮಹಾಸಭೆ ನೆರವೇರಿತು.

ಸಭೆಯಲ್ಲಿ ಲೆಕ್ಕಪತ್ರ ಮಂಡನೆಯ ಬಳಿಕ 2025ರಲ್ಲಿ ಜರುಗಲಿರುವ 21ನೇ ವರ್ಷದ ಅಷ್ಠಮಿ ಉತ್ಸವದ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು.

ನೂತನ ಪದಾಧಿಕಾರಿಗಳ ವಿವರ ಹೀಗಿದೆ:
ಅಧ್ಯಕ್ಷ: ಸುಬ್ರಹ್ಮಣ್ಯ ಮಾನಾಡು
ಕಾರ್ಯದರ್ಶಿ: ನಿತಿನ್ ಭಟ್
ಕೋಶಾಧಿಕಾರಿ: ಹರ್ಷಿತ್ ನೂಚಿಲ
ಉಪಾಧ್ಯಕ್ಷರು: ಶೇಖರ್ ಕುಕ್ಕೆ, ರವೀಂದ್ರ ಕೆ. ಸುಬ್ರಹ್ಮಣ್ಯ, ಸುಹಾಸ್ ಎಸ್.ಎಸ್, ಸುಕೇಶ್ ಬೇಕಲ್

ಜತೆ ಕಾರ್ಯದರ್ಶಿ: ದಿನೇಶ್ ಎಸ್.ಎನ್
ಜತೆ ಕೋಶಾಧಿಕಾರಿ: ಶ್ರೀಕುಮಾರ್ ಬಿಲದ್ವಾರ

ಉತ್ಸವದ ಯಶಸ್ವೀ ಆಯೋಜನೆಗಾಗಿ ಸಮಿತಿ ಶ್ರಮಿಸುವ ನಿಟ್ಟಿನಲ್ಲಿ ಈ ಮಹತ್ವದ ನೇಮಕಾತಿಗಳು ನಡೆದಿದೆ. ಸಭೆಯಲ್ಲಿ ವಿವಿಧ ಸದಸ್ಯರು ಪಾಲ್ಗೊಂಡು ಮುಂದಿನ ಉತ್ಸವದ ಕುರಿತಾಗಿ ಚರ್ಚೆ ನಡೆಸಿದರು.

Post a Comment

أحدث أقدم