ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಸ್ಥಾಪಕ ಪೌಲ್ ಹ್ಯಾರಿಸ್ ಅವರ ಸ್ಮರಣಾರ್ಥವಾಗಿ ನೀಡಲಾಗುವ ಅತ್ಯುನ್ನತ ಗೌರವ ಪದವಿ 'ಪೌಲ್ ಹ್ಯಾರಿಸ್ ಫೆಲೋಶಿಪ್' (PHF) ಪ್ರಶಸ್ತಿಗೆ ಸುಬ್ರಹ್ಮಣ್ಯದ ಸೇವಾಭಿವೃದ್ಧಿಯ ಹರಿಕಾರ ವಿಶ್ವನಾಥ ನಡುತೋಟ ಅವರು ಪಾತ್ರರಾಗಿದ್ದಾರೆ. ರೋಟರಿ ಸಂಸ್ಥೆಯಲ್ಲಿ ಸಲ್ಲಿಸಿದ ಸಮರ್ಪಿತ ಸೇವೆಗೆ ಕೃತಜ್ಞತೆಯ ರೂಪವಾಗಿ ಈ ಗೌರವವನ್ನು ನೀಡಲಾಗಿದೆ.
ವಿಶ್ವನಾಥ ನಡುತೋಟ ಅವರು ರೋಟರಿ ಕ್ಲಬ್ ಸುಬ್ರಹ್ಮಣ್ಯದ ಪೂರ್ವಾಧ್ಯಕ್ಷರಾಗಿದ್ದು, ಸಾಮಾಜಿಕ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ವ್ಯಕ್ತಿತ್ವ. ಅವರು ಜೆಸಿಐ ಸುಬ್ರಹ್ಮಣ್ಯ ಕುಕ್ಕೆ ಶ್ರೀಯ ಸ್ಥಾಪಕ ಅಧ್ಯಕ್ಷರಾಗಿರುವುದರ ಜೊತೆಗೆ, ಸೀನಿಯರ್ ಚೇಂಬರ್ ಮತ್ತು ಪ್ರೆಸ್ ಕ್ಲಬ್‌ಗಳ ಸ್ಥಾಪಕ ಅಧ್ಯಕ್ಷರಾಗಿಯೂ ಹಲವಾರು ಸಂಘಟನೆಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ.
ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಅವರು ನಿರಂತರವಾಗಿ ಸಲ್ಲಿಸಿದ ಶ್ರಮ ಹಾಗೂ ಶುದ್ಧ ನೀತಿಯ ಸೇವೆಯ ಫಲವಾಗಿ ಈ ಪ್ರಶಸ್ತಿ ಲಭಿಸಿದ್ದು, ಇದು ಸಂಪೂರ್ಣ ಸುಬ್ರಹ್ಮಣ್ಯ ಪರಿಸರಕ್ಕೂ ಹೆಮ್ಮೆ ತರದಂತೆ ಮಾಡಿದೆ.
ಸ್ಥಳೀಯರಿಂದ ಶ್ಲಾಘೆ:
ಅವರ ಈ ಗೌರವಾನ್ವಿತ ಸಾಧನೆಗೆ ಸ್ಥಳೀಯರು, ಸ್ನೇಹಿತರು ಮತ್ತು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಅಭಿನಂದನೆ ಸಲ್ಲಿಸುತ್ತಿದ್ದು, ಸಮಾಜ ಸೇವೆಯಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಹಾಗೂ ದಿಟ್ಟತೆಯ ಮೌಲ್ಯವು ಸದಾ ಗೆಲ್ಲುತ್ತದೆ ಎಂಬುದಕ್ಕೆ ವಿಶ್ವನಾಥ ನಡುತೋಟ ಅವರ ಸಾಧನೆ ನಿದರ್ಶನವಾಗಿದೆ.
إرسال تعليق