ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಅವರಿಗೆ ಎಂ ಪಿ ಎಚ್ ಎಫ್ ಪದವಿ.

ಸುಬ್ರಹ್ಮಣ್ಯ ಜುಲೈ 23 ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಜಯಪ್ರಕಾಶ್ ಅವರಿಗೆ ರೋಟರಿ ಅಂತರರಾಷ್ಟ್ರೀಯ ಸ್ಥಾಪಕರಾದ ಪೌಲ್ ಹ್ಯಾರಿಸ್ ಅವರ ನೆನಪಿನಲ್ಲಿ ನೀಡಲಾಗುವ ಎಂ ಪಿ ಎಚ್ ಎಫ್ ಪದವಿಯನ್ನು ಪಡೆದಿರುತ್ತಾರೆ. ಜಯಪ್ರಕಾಶ್ ಅವರು ಸುಬ್ರಹ್ಮಣ್ಯ ರೋಟರಿ ಕ್ಲಬ್ ಆರಂಭವಾದಂದಿನಿಂದ ಕಳೆದ 23 ವರ್ಷಗಳಲ್ಲಿ ಪ್ರಪ್ರಥಮವಾಗಿ ಎಂಪಿ ಎಚ್ಎಫ್ ಪಡೆದವರಾಗಿದ್ದಾರೆ.
 ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ರಸಾಯನಶಾಸ್ತ್ರ ಉಪನ್ಯಾಸಕರಾಗಿರುವ ಜಯಪ್ರಕಾಶ್ ಅವರು 2010ರಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅನ್ನು ಸೇರಿ 2019-20 ರಲ್ಲಿ ಕ್ಲಬ್ಬಿನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿರುತ್ತಾರೆ.2024 -25 ನೇ ಸಾಲಿನಲ್ಲಿ ಕ್ಲಬ್ ನ ಖಜಾಂಜಿಯಾಗಿ 2025- 26ನೇ ಸಾಲಿನಲ್ಲಿ ಪ್ರತಿಷ್ಠಿತ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷರಾಗಿ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದಾರೆ.

Post a Comment

Previous Post Next Post