ಸುಬ್ರಹ್ಮಣ್ಯ ಜುಲೈ 23 : ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ ಇಲ್ಲಿಗೆ ಸ್ಕ್ಯಾನಿಂಗ್, ಜೆರಾಕ್ಸ್ ಹಾಗೂ ಪ್ರಿಂಟ್‌ಗಳನ್ನು ಒಳಗೊಂಡ epson ಪ್ರಿಂಟರನ್ನ ಕೊಡುಗೆಯಾಗಿ ನೀಡಲಾಯಿತು.
ಸುಬ್ರಹ್ಮಣ್ಯದ ಬ್ಯಾಂಕ್ ಆಫ್ ಬರೋಡ ಶಾಖೆಯವರು ಪ್ರಿಂಟರ್ ನ ಪ್ರಾಯೋಜಕರಾಗಿದ್ದರು.
ಸಭಾಧ್ಯಕ್ಷತೆಯನ್ನ ಸುಬ್ರಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಜಯಪ್ರಕಾಶ್ ವಹಿಸಿದ್ದರು . ಸುಬ್ರಹ್ಮಣ್ಯ ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ಕೃಷ್ಣಪ್ರಸಾದ್ ಅವರು ಪ್ರಿಂಟರ್ ಅನ್ನು ಹಸ್ತಾಂತರಿಸಿ ಮಾತನಾಡುತ್ತಾ" ಇಂದಿನ ಮಕ್ಕಳು ಈಗಿನ ನವಯುಗದಲ್ಲಿ ಶರವೇಗವಾಗಿ ಸಾಗುವುದರೊಂದಿಗೆ ಯಾವುದೇ ಕಾರ್ಯಕ್ರಮಗಳು, ಅಥವಾ ಉಪಯುಕ್ತ ಮಾಹಿತಿಗಳನ್ನ ಪಡೆಯುವಲ್ಲಿ ಮುಂದಡಿಡಬೇಕಾಗುತ್ತದೆ.
ಇಂದು ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸುತ್ತ ಇದೆ. ಇನ್ನಷ್ಟು ಸೌಕರ್ಯಗಳು ಬೇಕಾದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಈ ಮೂಲಕವಾಗಿ ಕೈಜೋಡಿಸುವುದು ಅತ್ಯಗತ್ಯ" ಎಂದು ನುಡಿದರು. ಮುಖ್ಯ ಅತಿಥಿಯಾಗಿ ರೋಟರಿ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ ಉಪಸ್ಥಿತರಿದ್ದು ಶುಭ ಹಾರೈಸಿದರು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷರುಗಳಾದ ವಿಶ್ವನಾಥ ನಡುತೋಟ, ಗೋಪಾಲ ಎಣ್ಣೆ ಮಜಲ್, ಮೈಲಪ್ಪ ಸಂಕೇಶ ಶಾಲಾ ಶಿಕ್ಷಕರು ವೃಂದದವರು ಉಪಸ್ಥಿತರಿದ್ದರು ಶಾಲಾ ಮುಖ್ಯ ಶಿಕ್ಷಕ ಮಾಧವ ಮೂಕಮಲೆ ಧನ್ಯವಾದ ಸಮರ್ಪಿಸಿದರು .
Post a Comment