ಸುಬ್ರಹ್ಮಣ್ಯ, ಜುಲೈ 25: ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಆಂಬುಲೆನ್ಸ್ ಚಾಲಕ ಶ್ರೀ ಹೊನ್ನಪ್ಪ ಗೌಡ ಅವರ ಶವವನ್ನು ಕುಮಾರಧಾರ ನದಿಯಿಂದ ಪತ್ತೆಹಚ್ಚುವಲ್ಲಿ ನಿರಂತರ ಶ್ರಮ ಪಟ್ಟು ಪಾಲ್ಗೊಂಡ ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ಅವರ ತಂಡದ ಸೇವೆ ಗುರುತಿಸಿ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯಿಂದ ಸನ್ಮಾನಿಸಲಾಯಿತು.
ಈ ಶೋಧ ಕಾರ್ಯದ ಕೊನೆ ದಿನದಂದು, ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ರಾಜೇಶ್ ಎನ್ ಎಸ್ ಅವರ ನೇತೃತ್ವದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿನ ಮುಂಭಾಗ ಈ ತಂಡದವರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಈ ವೇಳೆ:
ಈಶ್ವರ್ ಮಲ್ಪೆ ಅವರಿಗೆ ರೂ. ಗ್ರಾಮ ಪಂಚಾಯಿತಿ ಕಡೆಯಿಂದ 10,000 ,
ಯಜ್ಞೇಶ್ ಆಚಾರ್ಯ ಮತ್ತು ದಿನೇಶ್ ಮೊಗ್ರ್ ಅವರಿಗೆ ತಲಾ ರೂ. 5,000
ಉದಯ ನೂಚಿಲ ಅವರಿಗೆ ರೂ. 5,000
ಜೊತೆಗೆ ಐನೆಕ್ಕಿದು ಸುಬ್ರಹ್ಮಣ್ಯ ಸಹಕಾರಿ ಬ್ಯಾಂಕ್ ವತಿಯಿಂದ ರೂ. 5,000 ನೀಡುವ ಮೂಲಕ ಗೌರವಿಸಲಾಯಿತು.
ಸ್ಥಳೀಯ ಗ್ರಾಮ ಪಂಚಾಯಿತಿಯ ಈ ಗೌರವದ ಕ್ರಮ ಶೋಧ ತಂಡದ ಆತ್ಮನಿರತ ಸೇವೆಗೆ ಸಾಮಾಜಿಕವಾಗಿ ಮಾನ್ಯತೆ ನೀಡಿದಂತಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರು ಹಾಗೂ ಹಲವಾರು ಸಂಘಟನೆಗಳ ಪ್ರತಿನಿಧಿಗಳು ಹಾಜರಿದ್ದರು.
Post a Comment