ಹೋನ್ನಪ್ಪ ಗೌಡ ಶೋಧ ಕಾರ್ಯದಲ್ಲಿ ಸಮರ್ಪಿತ ಸೇವೆ – ಈಶ್ವರ್ ಮಲ್ಪೆ ತಂಡಕ್ಕೆ ದೇವಸ್ಥಾನದಿಂದ ಗೌರವ.

ಕುಕ್ಕೆ ಸುಬ್ರಹ್ಮಣ್ಯ: ಜುಲೈ,25,ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಆಂಬುಲೆನ್ಸ್ ಚಾಲಕ ಹೋನ್ನಪ್ಪ ಗೌಡ ಅವರ ಶವವನ್ನು ಕುಮಾರಧಾರ ನದಿಯ ದಡದಲ್ಲಿ ಶೋಧ ತಂಡ ಪತ್ತೆ ಹಚ್ಚಿದ್ದು, ಶೋಧ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರವಹಿಸಿದ್ದ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಅವರ ತಂಡದವರಿಗೆ ಇಂದು ವಿಶೇಷ ಗೌರವ ಸಲ್ಲಿಸಲಾಯಿತು.

ಈ ಗೌರವ ಸಮಾರಂಭವು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಅವರ ಮಾರ್ಗದರ್ಶನದಲ್ಲಿ ನೆರವೇರಿತು. ಶೋಧ ಕಾರ್ಯದ ವಿವಿಧ ಹಂತಗಳಲ್ಲಿ ನಿರಂತರ ಶ್ರಮಪಟ್ಟು ಕಾರ್ಯನಿರ್ವಹಿಸಿದ ಈ ತಂಡದ ಕಾರ್ಯವೈಖರಿಯು ಸ್ಥಳೀಯರಲ್ಲಿ ಶ್ಲಾಘನೆಗೆ ಪಾತ್ರವಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್, ಮಾಜಿ ಸಮಿತಿ ಸದಸ್ಯ ಮಾಧವ ಮತ್ತು ದೇವಸ್ಥಾನದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಮೂಲಕ ಸಮಾಜಸೇವೆಗಾಗಿ ಸಮರ್ಪಿತವಾಗಿ ಶ್ರಮಿಸುವ ತಂಡಗಳಿಗೆ ಪೂರಕ ಸನ್ನಿಧಾನವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಇನ್ನೊಂದು ಉತ್ತಮ ನಿದರ್ಶನವಾಗಿ ಹೊರಹೊಮ್ಮಿದೆ.

Post a Comment

Previous Post Next Post