ಸುಬ್ರಹ್ಮಣ್ಯ: ಇಂಜಾಡಿ ಬಳಿ ಮರ ಬಿದ್ದು ರಸ್ತೆ ತಾತ್ಕಾಲಿಕವಾಗಿ ಬ್ಲಾಕ್ – ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆಗಳ ಕಾರ್ಯಾಚರಣೆ.

ಸುಬ್ರಹ್ಮಣ್ಯ, ಜುಲೈ 26:
ಇಂದು ಅಪರಾಹ್ನ ಸುಬ್ರಹ್ಮಣ್ಯದ ಇಂಜಾಡಿ ಬಳಿ ದೊಡ್ಡಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ. ಈ ಘಟನೆ ಕೆಲಕಾಲ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತು.

ಘಟನೆಯ ನಂತರ ಸ್ಥಳಕ್ಕೆ ತ್ವರಿತವಾಗಿ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದರು. ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಕೂಡಾ ಮುರಿದು ಬಿದ್ದಿದ್ದು, ವಿದ್ಯುತ್ ಸರಬರಾಜು ವ್ಯತ್ಯಯಗೊಂಡಿದೆ.

ಮೆಸ್ಕಾಂ (MESCOM) ಸಿಬ್ಬಂದಿಗಳು ಕೂಡ ಸ್ಥಳಕ್ಕೆ ಆಗಮಿಸಿ ಮುರಿದ ವಿದ್ಯುತ್ ಲೈನನ್ನು ಮರುಸ್ಥಾಪಿಸಲು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಸ್ಥಳೀಯರ ಸಹಕಾರದಿಂದ ಸಂಬಂಧಿತ ಇಲಾಖೆಗಳು ರಸ್ತೆಗೆ ಬಿದ್ದ ಮರ ತೆರವು ಗೊಳಿಸಿದರು.

Post a Comment

Previous Post Next Post