*ರೋಟರಿ ಕ್ಲಬ್ ಸುಬ್ರಹ್ಮಣ್ಯ ಪದಗ್ರಹಣ ಸಮಾರಂಭ*

 ಸುಬ್ರಹ್ಮಣ್ಯ ಜುಲೈ 4 :ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ 2025- 26ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.3 ರಂದು ಯೇನೆಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು.

ಪದಗ್ರಹಣ ಅಧಿಕಾರಿಯಾಗಿ ಪಿಡಿಜಿ. ಮೇಜರ್ ಡೋನರ್. ಪ್ರಕಾಶ್ ಕಾರಂತ್ ಪದಗ್ರಹಣ ನಡೆಸಿಕೊಟ್ಟರು. ಸಭೆಯ ಅಧ್ಯಕ್ಷತೆಯನ್ನು ಹಾಲಿ ಅಧ್ಯಕ್ಷ ಚಂದ್ರಶೇಖರ ನಾಯರ್ ವಹಿಸಿದ್ದರು. 
ಮುಖ್ಯ ಅತಿಥಿಯಾಗಿ ಎಸ್.ಎಸ್.ಪಿ.ಯು ಕಾಲೇಜು ಪ್ರಾಂಶುಪಾಲ ಸೋಮಶೇಖರ್ ನಾಯಕ್ ಉಪಸ್ಥಿತರಿದ್ದರು.
ರೋಟರಿ ಝೋನ್ 5 ರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ, ಝೋನ್ 5 ವಲಯ ಸೇನಾನಿ ವಿಜಯಕುಮಾರ್ ಅಮೈ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮಮೋಹನ್ ಕೆ.ಎನ್, ಸುಬ್ರಹ್ಮಣ್ಯ ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಪ್ರಶಾಂತ್ ಕೋಡಿಬೈಲ್, ಕಾರ್ಯದರ್ಶಿ ಚಿದಾನಂದ ಕುಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ಪದ ಪ್ರಧಾನ ಬಳಿಕ ಸಭೆಯಅಧ್ಯಕ್ಷತೆಯನ್ನು ನೂತನ ಅಧ್ಯಕ್ಷ ಜಯಪ್ರಕಾಶ್ ಆರ್ ವಹಿಸಿದ್ದರು. ನೂತನ ಕಾರ್ಯದರ್ಶಿ ಭವಾನಿಶಂಕರ ಪೈಲಾಜೆ ವೇದಿಕೆಯಲ್ಲಿ ಇದ್ದರು. 
 ತದನಂತರ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಾದ
ಸೂರಜ್, ತನ್ವಿಕ ಎಂ.ಎಚ್ ಪ್ರೀತಿ ಆರ್.ಕೆ, ವರ್ಷಿಣಿ , ತನ್ವಿಕಾ, ಹಾರ್ದಿಕ್ ಎಂ.ಪಿ, ಭವನೀಶ್ ಎಂ.ಆರ್,, ಅಂಕುಶ್ ಎಣ್ಣೆಮಜಲು ಅವರುಗಳನ್ನು ಗೌರವಿಸಲಾಯಿತು.
ಗೋಪಾಲ್ ಎಣ್ಣೆಮಜಲು ಪ್ರಕಾಶ್ ಕಾರಂತ್ ಅವರ ಪರಿಚಯ ಮಾಡಿದರೆ, ನೂತನ ಪದಾಧಿಕಾರಿಗಳ ಪರಿಚಯವನ್ನು ಶಿವರಾಮ ಏನೆಕಲ್ಲು, ನಾಗೇಶ್ ಪರಮಲೆ ಮಾಡಿದರು‌. ನವೀನ್ ವಾಲ್ತಾಜೆ ಪ್ರತಿಭಾನ್ವಿತ ಪಟ್ಟಿ ವಾಚಿಸಿದರು. ಕ್ಲಬ್ಬಿನಿಂದ ಈ ವರ್ಷ ಪಿ ಎಚ್ ಎಫ್ ಪಡೆದ ವಿಶ್ವನಾಥ ನಡು ತೋಟ, ಮಾಲಪ್ಪ ಸಂಕೇಶ ಚಂದ್ರಶೇಖರ ನಾಯರ್ ಹಾಗೂ ಎಮ್ ಪಿ ಎಚ್ ಎಫ್ ಪಡೆದ ಜಯಪ್ರಕಾಶ್ ಆರ್ ಅವರುಗಳನ್ನು ಗೌರವಿಸಲಾಯಿತು. ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿಗೆ ನೂತನ ಸದಸ್ಯರುಗಳಾದ ಕೃಷ್ಣಪ್ರಸಾದ್ ಆರ್ ಹಾಗೂ ಸೌಮ್ಯ ಬಿ ಪೈ ಅವರುಗಳನ್ನ ಸೇರ್ಪಡೆಗೊಳಿಸಲಾಯಿತು. ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿಗೆಈ ವರ್ಷ ಗೋಲ್ಡನ್ ಪ್ಲಸ್ ಅವಾರ್ಡ್, ಸಿಗ್ನಿಫಿಕೆಂಟ್ ಅವಾರ್ಡ್ ಹಾಗೂ ಎಂಗೇಜ್ಮೆಂಟ್ ಅವಾರ್ಡ್ ಬರಲು ಕಾರ್ಯಕರ್ತರಾದ ಅಧ್ಯಕ್ಷ ಚಂದ್ರಶೇಖರ ನಾಯರ್ ಹಾಗೂ ಕಾರ್ಯದರ್ಶಿ ಚಿದಾನಂದ ಕುಲ ಅವರುಗಳನ್ನು ಸನ್ಮಾನಿಸಲಾಯಿತು. ವಿಶ್ವನಾಥ ನಡುತೋಟ ಸಂಪಾದಕತ್ವದ ಬುಲೆಟಿನ್ ಕುಮಾರಧಾರ "ವನ್ನು ಅಸಿಸ್ಟೆಂಟ್ ಗವರ್ನರ್ ಅವರು ಬಿಡುಗಡೆಗೊಳಿಸಿದರು.
ಕಿಶೋರ್ ಕುಮಾರ್ ಕೂಜುಗೋಡು ಸ್ವಾಗತಿಸಿದರು, ಭವಾನಿಶಂಕರ ಪೈಲಾಜೆ ವಂದಿಸಿದರು. ರಾಮಕೃಷ್ಣ ಮಲ್ಲಾರ ಕಾರ್ಯಕ್ರಮ ನಿರೂಪಿಸಿದರು.

Post a Comment

أحدث أقدم