ಸ್ವಾಮೀಜಿಯವರನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಹಾಗೂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎ. ಸುರಾಜ್ ಅವರು ಕಾಶಿ ಕಟ್ಟೆ ಗಣಪತಿ ದೇವಸ್ಥಾನದ ಬಳಿ ಆತ್ಮೀಯವಾಗಿ ಸ್ವಾಗತಿಸಿದರು.
ಅಂತರ್ದರ್ಶನದ ಭಾಗವಾಗಿ ಶ್ರೀ ಸ್ವಾಮೀಜಿಗಳು ಮೊದಲು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು, ನಂತರ ನರಸಿಂಹ ದೇವರ ದರ್ಶನವೂ ಪಡೆದರು. ಬಳಿಕ ಶ್ರೀ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಮಠಾಧಿಪತಿ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು ಪಾರಂಪರಿಕ ಆಚರಣೆಗಳೊಂದಿಗೆ ಶಿರೂರು ಪೀಠಾಧಿಪತಿಗಳಾದ ವೇದವರ್ಧನ ತೀರ್ಥರು ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತ ಅಧಿಕಾರಿ ಸುದರ್ಶನ ಜೋಯಿಸ್, ವ್ಯವಸ್ಥಾಪನ ಸಮಿತಿಯ ಅಶೋಕ ನೇಕ್ರಾಜೆ, ಮಾಸ್ಟರ್ ಪ್ಲಾನ್ ಸಮಿತಿಯ ಲೋಲಕ್ಷ ಕೈಕಂಬ, ಕಿಶೋರ್ ಆರಂಪಾಡಿ, ದಿನೇಶ್ ಎಣ್ಣೆ ಮಜಲು, ಕುಲ್ಕುಂದ ಭವಿಷ್ ನಾಣಯ್ಯ, ರವೀಂದ್ರ ಭಟ್, ಗುರುಪ್ರಸಾದ್ ಹಾಗೂ ಸುಬ್ರಹ್ಮಣ್ಯ ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶ್ರದ್ಧಾ, ಭಕ್ತಿ ಮತ್ತು ಪರಂಪರೆಯ ಪಾವನ ಸಮ್ಮಿಲನವಾಗಿದೆ ಈ ದರ್ಶನ ಯಾತ್ರೆ.
إرسال تعليق