ವಾಟ್ಸಪ್‌ನಲ್ಲಿ ಕೋಮುವಾದಿ ಹಾಗೂ ಸುಳ್ಳು ಆರೋಪಗಳ ಪ್ರಚಾರ – ಒಬ್ಬ ಆರೋಪಿಯ ಬಂಧನ, ಮತ್ತೊಬ್ಬನಿಗೆ ಬಾಡಿ ವಾರಂಟ್.

ಮಂಗಳೂರು, ಜುಲೈ 14:
ವಾಟ್ಸಪ್ ಗ್ರೂಪ್‌ಗಳ ಮೂಲಕ ಕೋಮುವಾದಿ ಅಸತ್ಯ ಮಾಹಿತಿ ಹರಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯು ಹಿಂದೂ ಸಮುದಾಯದ ವ್ಯಕ್ತಿಯೊಬ್ಬರ ವಿರುದ್ಧ ಸುಳ್ಳು ಆರೋಪಗಳನ್ನು ಹರಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ:
ಹೊನ್ನಕಟ್ಟೆ, ಕುಳಾಯಿ ನಿವಾಸಿ ರಾಜೇಶ್ ಎಂಬವರು ಸುರತ್ಕಲ್‌ನ ಹೊಸಬೆಟ್ಟು ಪ್ರದೇಶದಲ್ಲಿ “ಆರ್.ವಿ ಎಂಟರ್‌ಪ್ರೈಸಸ್” ಎಂಬ ಸಂಸ್ಥೆ ನಡೆಸುತ್ತಿದ್ದಾರೆ. ಇವರು ತಮ್ಮ ಸಂಸ್ಥೆಯ ಮೂಲಕ ಯುವತಿಯರಿಗೆ ಉದ್ಯೋಗ ನೀಡುತ್ತಿದ್ದು, ಈ ಸಂಬಂಧ ವಿವಿಧ ವಾಟ್ಸಪ್ ಗ್ರೂಪ್‌ಗಳಲ್ಲಿ ಅನಾಮಧೇಯ ವ್ಯಕ್ತಿಗಳು ಸುಳ್ಳು ಮಾಹಿತಿ ಹಾಗೂ ಕೋಮು ದ್ವೇಷ ಉದ್ದೀಪಕ ಸಂದೇಶಗಳನ್ನು ಹರಡಿದಿದ್ದರು.

ಅದರಲ್ಲೂ, “ಪಿರ್ಯಾದಿದಾರರು ಮತಾಂತರ ಕಾರ್ಯದಲ್ಲಿ ತೊಡಗಿದ್ದಾರೆ, ಬ್ಲೂ ಫಿಲಂ ಸಿಡಿಗಳನ್ನು ಮಾರಾಟ ಮಾಡುತ್ತಿದ್ದಾರೆ, ಯುವತಿಯರನ್ನು ಮತಾಂತರ ಮಾಡಲು ಕಚೇರಿಯಲ್ಲಿ ಬಳಸುತ್ತಿದ್ದಾರೆ” ಎಂಬಂತಹ ಅನಾದರದ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಜೊತೆಗೆ, “ಹಿಂದೂ ಯುವತಿಯನ್ನು ತಮ್ಮ ತಮ್ಮನಿಗೆ ಮದುವೆ ಮಾಡಿಸಲು ಉದ್ದೇಶಿಸಿದ್ದಾರೆ ಮತ್ತು ಆ ಯುವತಿ ದೇವಸ್ಥಾನ ಬಿಟ್ಟು ಚರ್ಚ್‌ಗೆ ಹೋಗುತ್ತಿದ್ದಾರೆ” ಎಂಬ ಕೂಹಕ ಮಾಹಿತಿಯನ್ನೂ ಹರಡಲಾಗಿತ್ತು.

ಪೊಲೀಸ್ ಕ್ರಮ:
ಈ ಕುರಿತು ಪಿರ್ಯಾದಿದಾರರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ದಿನಾಂಕ 13-07-2025 ರಂದು ಪ್ರಕರಣವನ್ನು ಅ.ಕ್ರ. 93/2025 ಅಡಿಯಲ್ಲಿ ಭಾರತೀಯ ದಂಡ ಸಂಹಿತೆ (BNS) ಸೆಕ್ಷನ್‌ಗಳು 352, 353(1), 353(2)ರಂತೆ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

ಆರೋಪಿಯ ಬಂಧನ:
ಸುರತ್ಕಲ್ ಠಾಣೆಯ ಪೋಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಉಪನಿರೀಕ್ಷಕ ರಘು ನಾಯ್ಕ್ ನೇತೃತ್ವದ ತಂಡ ಆರೋಪಿಯನ್ನು ಗುರುತಿಸಿ ಜುಲೈ 14 ರಂದು ಬಂಧಿಸಲಾಗಿದೆ.
ಬಂಧಿತನ ವಿವರ ಈ ರೀತಿ:

ನಾಮ: ರಾಮ್ ಪ್ರಸಾದ್ @ ಪೋಚ
ವಯಸ್ಸು: 42 ವರ್ಷ
ತಂದೆ: ದಿ. ಸಂಜೀವ ಆಚಾರಿ
ವಾಸಸ್ಥಳ: ಮನೆ ನಂ. 3-22, ಕೆ.ಕೆ ಶೆಟ್ಟಿ ಕಂಪೌಂಡ್, ವನದುರ್ಗಾ ಇಂಜಿನಿಯರಿಂಗ್ ವರ್ಕ್ಸ್, ಕುಳಾಯಿ ಗ್ರಾಮ, ಮಂಗಳೂರು


ಆತನನ್ನು ವಶಕ್ಕೆ ತೆಗೆದು ಪ್ರಾಥಮಿಕ ವಿಚಾರಣೆ ನಡೆಸಿದಾಗ ಆರೋಪವನ್ನು ಒಪ್ಪಿಕೊಂಡಿದ್ದು, ನಂತರ ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ಇನ್ನೊಬ್ಬ ಆರೋಪಿ ಈಗಾಗಲೇ ಜೈಲಿನಲ್ಲಿ:
ಇದೇರೀತಿ ಪ್ರಕರಣದ ಇನ್ನೊಂದು ಪ್ರಮುಖ ಆರೋಪಿ ಲೋಕೇಶ್ ಕೋಡಿಕೆರೆ ಎಂಬಾತನು ಈಗಾಗಲೇ ಪಡುಬಿದ್ರಿ ಪೊಲೀಸ್ ಠಾಣೆಯ ಅ.ಕ್ರ. 81/2025 ರಂತೆ ದಸ್ತಗಿರಿಯಾಗಿದ್ದು, ಪ್ರಸ್ತುತ ಉಡುಪಿ ಜಿಲ್ಲಾ ಕಾರಾಗೃಹ (ಹಿರಿಯಡ್ಕ)ದಲ್ಲಿ ಬಂಧನದಲ್ಲಿದ್ದಾನೆ. ಆತನನ್ನು ಬಾಡಿವಾರೆಂಟ್ ಮೂಲಕ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಪೊಲೀಸರ ನಿಗಾ ಮುಂದುವರಿದಿದೆ
ಈ ಘಟನೆ ಸಂಬಂಧಿತ ತನಿಖೆ ಇನ್ನೂ ಮುಂದುವರಿದಿದ್ದು, ಕೋಮುವಾದ ಪ್ರಚೋದನೆ ಹಾಗೂ ಅಸತ್ಯ ಮಾಹಿತಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸುರತ್ಕಲ್ ಪೊಲೀಸರು ತಿಳಿಸಿದ್ದಾರೆ.

Post a Comment

أحدث أقدم