ಬೊಳುವಾರಿನಲ್ಲಿ ತಲವಾರು ಹಿಡಿದ ವ್ಯಕ್ತಿ ಅರೆಸ್ಟ್ – ಸಾರ್ವಜನಿಕ ಸಹಕಾರದಿಂದ ಪೊಲೀಸರು ಚುರುಕು ಕಾರ್ಯಾಚರಣೆ.


ಪುತ್ತೂರು: ಜುಲೈ 14, 2025
ಪುತ್ತೂರು ತಾಲೂಕಿನ ಕಸ್ಬಾ ಗ್ರಾಮದ ಬೊಳುವಾರು ಎಂಬಲ್ಲಿ ಮಧ್ಯಾಹ್ನದ ವೇಳೆ ಒಬ್ಬ ವ್ಯಕ್ತಿ ತನ್ನ ಕೈಯಲ್ಲಿ ತಲವಾರು ಹಿಡಿದು ಸಾರ್ವಜನಿಕ ಸ್ಥಳದಲ್ಲಿ ತೋರ್ಪಡಿಸುತ್ತಾ, ಸಾರ್ವಜನಿಕರಲ್ಲಿ ಭಯವನ್ನುಂಟುಮಾಡುತ್ತಿದ್ದ ದೃಶ್ಯಗಳು ಗಮನಕ್ಕೆ ಬಂದಿವೆ.

ತಕ್ಷಣ ಸ್ಥಳೀಯರಿಂದ ಈ ಕುರಿತು ಮಾಹಿತಿ ದೊರೆತ ಪುತ್ತೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ, ಸಾರ್ವಜನಿಕರ ಸಹಕಾರದಿಂದ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರು. ವಿಚಾರಣೆಯಲ್ಲಿ ಆ ವ್ಯಕ್ತಿಯು ಹಾಸನ ಮೂಲದ ರಾಜು (45), ಪ್ರಸ್ತುತ ಬಂಟ್ವಾಳದಲ್ಲಿ ವಾಸವಿರುವುದಾಗಿ ಗುರುತಿಸಲಾಗಿದೆ.

ಆತನನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದು, ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ: 59/2025ರಂತೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣವನ್ನು ಭಾರತೀಯ ಶಸ್ತ್ರಾಸ್ತ್ರ ನಿಯಮ 25(1B)(b) ಮತ್ತು ಭಾರತೀಯ ದಂಡ ಸಂಹಿತೆ (BNS) ಸೆಕ್ಷನ್ 110ರ ಅಡಿಯಲ್ಲಿ ದಾಖಲಿಸಿಕೊಂಡು, ಮುಂದಿನ ತನಿಖೆ ನಡೆಯುತ್ತಿದೆ.

Post a Comment

أحدث أقدم