ದಿನಾಂಕ 01.07.2025 ರಂದು ಅಜಿ.ಎಂ.ಜೋಸ್ ಎಂಬುವವರು ತಮ್ಮ ವಾಟ್ಸ್‌ಅಪ್ ಸ್ಟೇಟಸ್‌ನಲ್ಲಿ ಭಾರತದ ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಸಚಿವರ ಚಿತ್ರಗಳ ನಡುವೆ ಅಶ್ಲೀಲ ಮಹಿಳಾ ಚಿತ್ರವೊಂದನ್ನು ಅಳವಡಿಸಿದ ಜೊತೆಗೆ, ಹಿಂದೂ ಧರ್ಮದ ದೇವರುಗಳೊಂದಿಗೆ ಸಂಬಂಧಿಸಿದಂತೆ ಬಿಂಬಿಸುವ ಕಾರ್ಟೂನ್ ಚಿತ್ರವನ್ನೂ ಹಾಕಿ ಆಕ್ಷೇಪಾರ್ಹ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸ್ಟೇಟಸ್ ಹಂಚಿಕೆಯು ಧಾರ್ಮಿಕ ಭಾವನೆಗೆ ದಕ್ಕೆಯಾಗುವ ರೀತಿಯದ್ದಾಗಿದ್ದು, ಸಾರ್ವಜನಿಕರಲ್ಲಿ ದ್ವೇಷಭಾವನೆ ಉಂಟುಮಾಡುವ ಉದ್ದೇಶದಿಂದ ಕೂಡಿದೆ ಎಂಬುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣ ಸಂಬಂಧಿತ ವ್ಯಕ್ತಿ ಉದ್ದೇಶಪೂರ್ವಕವಾಗಿ ಈ ಸ್ಟೇಟಸ್ ಹಂಚಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧವೇನುರು ಪೊಲೀಸ್ ಠಾಣೆಯಲ್ಲಿ ಅ.ಕ್ರ 57/2025, ಭಾರತೀಯ ದಂಡ ಸಂಹಿತೆ (BNS-2023) ನ ಕಲಂ 353(2)ರ ಪ್ರಕಾರ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.
ಪೊಲೀಸ್ ಇಲಾಖೆ ಇಂದ ಸಾಮಾಜಿಕ ಮಾಧ್ಯಮಗಳ ದುರುಪಯೋಗವನ್ನು ತಡೆಯಲು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಅಥವಾ ಸಾಂಪ್ರದಾಯಿಕ ಸಮರಸತೆಯ ವಿರುದ್ಧ ಹೋಗುವ ಯಾವುದೇ ರೀತಿಯ ಪೋಸ್ಟ್‌ಗಳನ್ನು ಹಂಚುವುದರಿಂದ ದೂರವಿರಬೇಕು ಎಂದು ಪೊಲೀಸರು ಎಚ್ಚರಿಸಿದ್ದಾರೆ.
إرسال تعليق