ಕೌಕ್ರಾಡಿ ನಿವಾಸಿಯ ಪೇಸ್‌ಬುಕ್ ದೂರಿಗೆ- ಬೆಳ್ತಂಗಡಿ ಪೊಲೀಸರಿಂದ ಪ್ರಕರಣ ದಾಖಲು.


ಬೆಳ್ತಂಗಡಿ, ಜುಲೈ 11, 2025:
ಕಡಬ ತಾಲೂಕು ಕೌಕ್ರಾಡಿ ಗ್ರಾಮದ ನಿವಾಸಿ ಜಯಂತ ಟಿ (ವಯಸ್ಸು 46) ಎಂಬವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕಂಡ ಅಶ್ಲೀಲ ಪೋಸ್ಟ್‌ವೊಂದರ ಬಗ್ಗೆ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿರ್ಯಾದಿದಾರರ ಹೇಳಿಕೆ ಪ್ರಕಾರ, ಅವರು ದಿನಾಂಕ 11-07-2025 ರಂದು ತಮ್ಮ ಪೇಸ್‌ಬುಕ್ ಖಾತೆಯನ್ನು ಪರಿಶೀಲಿಸುತ್ತಿದ್ದ ವೇಳೆ, “ಪ್ರವೀಣ್ ಲೊಬೋ” ಎಂಬ ಖಾತೆಯಲ್ಲಿ ಸೌಜನ್ಯ ಪರ ಹೋರಾಟಕ್ಕೆ ಸಂಬಂಧಿಸಿದಂತೆ ಅಶ್ಲೀಲ ಸಂದೇಶವಿರುವ ಪೋಸ್ಟ್‌ ಪ್ರಸಾರವಾಗಿರುವುದು ಗಮನಕ್ಕೆ ಬಂದಿದೆ. ಇದರಿಂದ ಅವರು ಮಾನಸಿಕವಾಗಿ ಅಸಹನೆಗೆ ಒಳಗಾಗಿದ್ದು, ಕಾನೂನು ಕ್ರಮಕ್ಕಾಗಿ ಸಂಬಂಧಪಟ್ಟ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಬೆಲ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಂಖ್ಯೆ 58/2025 ರಂತೆ ಭಾರತೀಯ ದಂಡ ಸಂಹಿತೆ (ಬಿಎನ್‌ಎಸ್‌ 2023)ನ ಕಲಂ 296 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಪೊಲೀಸರು ಘಟನೆಯ ಕುರಿತಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಪೊಲೀಸರ ಕಡೆಯಿಂದ ಸಾರ್ವಜನಿಕರಿಗೆ ವಿನಂತಿ:
ಸಾಮಾಜಿಕ ಜಾಲತಾಣಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವುದು ಹಾಗೂ ಅಂತಹ ಅಶ್ಲೀಲ, ಅವಹೇಳನಕಾರಿ ಅಥವಾ ದ್ವೇಷಭರಿತ ಪೋಸ್ಟ್‌ಗಳನ್ನು ಶೇರ್ ಮಾಡುವುದರಿಂದ ತೀವ್ರ ಕಾನೂನು ಪರಿಣಾಮ ಎದುರಾಗಬಹುದೆಂದು ಪೊಲೀಸರು ಎಚ್ಚರಿಸಿದ್ದಾರೆ.

Post a Comment

أحدث أقدم