ಸುಬ್ರಹ್ಮಣ್ಯ ಆಗಸ್ಟ್ 26: ಸುಬ್ರಹ್ಮಣ್ಯದ ಕಾಶಿ ಕಟ್ಟೆ ಬಳಿ ಇರುವ ಸುಬ್ರಹ್ಮಣ್ಯ- ಐದಕ್ಕಿದು ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಮಂಗಳವಾರ ಸೊಸೈಟಿ ಕಟ್ಟಡದಲ್ಲಿ ಸಾಮಾನ್ಯ ಜನ ಸೇವಾ ಕೇಂದ್ರ ಆರಂಭಗೊಂಡಿತು.
ಕೇಂದ್ರ ಸರಕಾರದ ಯೋಜನೆ ಅಡಿ ರಾಜ್ಯದ 5491 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುವ ಗುರಿಯನ್ವಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕಾಮನ್ ಸರ್ವಿಸ್ ಸೆಂಟರ್ ಗಳಾಗಿ ಕಾರ್ಯನಿರ್ವಹಿಸಿದ್ದಲ್ಲಿ ಗ್ರಾಮೀಣ ಭಾಗದ ನಾಗರಿಕರಿಗೆ 300 ವಿವಿಧ ಬಗೆಯ ಈ ಸೇವೆಗಳನ್ನು (ಬ್ಯಾಂಕಿಂಗ್, ವಿಮೆ, ಆಧಾರ್ ಸೇವೆಗಳು,ಆರೋಗ್ಯ ಸೇವೆಗಳು, ಕಾನೂನು ಸೇವೆಗಳು, ಪಾನ್ ಕಾರ್ಡ್, ರೈಲ್ವೆ, ಬಸ್,ವಿಮಾನ ಟಿಕೆಟ್ )ಇತ್ಯಾದಿ ನೀಡುವುದಲ್ಲದೆ ಸಂಘದ ಆದಾಯ ಹೆಚ್ಚಿಸಲು ಕೂಡ ಸಹಕಾರಿಯಾಗುವುದು.
ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯ- ಐನಕ್ಕಿದು ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ನೆಲ ಅಂತಸ್ದಲ್ಲಿ ಸೇವಾ ಕೇಂದ್ರವನ್ನು ಪ್ರಾರಂಭಿಸಲಾಯಿತು. ಬೆಳಗ್ಗೆ ಪುರೋಹಿತರಿಂದ ಗಣ ಹೋಮ ವಿಧಿ ವಿಧಾನಗಳು ನಡೆದು, ತದನಂತರ ಸುಬ್ರಹ್ಮಣ್ಯ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೆಂಕಟೇಶ, ಎಚ್ ಎಲ್, ಉಪಾಧ್ಯಕ್ಷ ದುಗ್ಗಪ್ಪ ಹೆಚ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಕೆ ಎಸ್ ಹಾಗೂ ನಿರ್ದೇಶಕರುಗಳಾದ ಜಯಪ್ರಕಾಶ್ ಕೂಜುಗೋಡು, ಮಾಧವ ದೇವರಗದ್ದೆ, ಮೋಹನ್ದಾಸ್ ರೈ,ಯಶೋದ ಕೃಷ್ಣ, ಗಿರೀಶ್ ಆಚಾರ್ಯ ಪೈಲಾಜೆ,
ಸೋಮಶೇಖರ ಕಟ್ಟೆಮನೆ,ಭಾರತಿ ಡಿ ಬಿ,ಹಾಗೂ ಮನೋಜ್ ಎಂ ಮತ್ತು ಸೊಸೈಟಿ ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ ಕಾರ್ಯ ಆರಂಭ ಮಾಡಲಾಯಿತು.
Post a Comment