ಸುಬ್ರಹ್ಮಣ್ಯ ಆಗಸ್ಟ್ 26 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಗೌರಿ ತೃತೀಯ ದಲ್ಲಿ ಶೃಂಗೇರಿ ಮಠದ ಪಕ್ಕದಲ್ಲಿಗೌರಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಇದೇ ಭಾಗದ ಎದುರುಗಡೆಯಲ್ಲಿ ಭಕ್ತಾದಿಗಳು ಆದಿ ಸುಬ್ರಹ್ಮಣ್ಯ ಯಾಗ ಶಾಲೆಯಲ್ಲಿ ಸೋಮವಾರ ಸರ್ಪಸಂಸ್ಕಾರ ಪೂಜೆಯನ್ನ ಮುಗಿಸಿ ಇಂದು ಕುಕ್ಕೆ ಕ್ಷೇತ್ರದ ನಾಗ ಪ್ರತಿಷ್ಠ ಮಂಟಪದಲ್ಲಿ ನಾಗ ಪ್ರತಿಷ್ಠ ಸೇವೆಯನ್ನ ಸಲ್ಲಿಸಿ ಪ್ರಸಾದಕ್ಕಾಗಿ ಭಕ್ತರ ದಂಡೆ ಕಂಡು ಬಂತು. ದೂರದೂರುಗಳಿಂದ ಬುಕಿಂಗ್ ಮಾಡಿ ಸರ್ಪಸಂಸ್ಕಾರ ಸೇವೆ ಹಾಗೂ ನಾಗ ಪ್ರತಿಷ್ಠ ಸೇವೆಯನ್ನ ಮುಗಿಸಿ ಪ್ರಸಾದ ಸ್ವೀಕರಿಸಿ ಭಕ್ತಾದಿಗಳು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿರುವುದು ಸರ್ವೇಸಾಮಾನ್ಯ.
ಗೌರಿ ತೃತೀಯ ಹಾಗೂ ಗಣೇಶ ಚತುರ್ಥಿ ರಜಾದಿನವಾದ್ದರಿಂದ ಅಧಿಕ ಸಂಖ್ಯೆಯಲ್ಲಿ ಸೇವಾಾರ್ಥಿಗಳು ಕೂಡ ಜಮಾಯಿಸಿದ್ದರು. ಶ್ರೀ ದೇವಳದ ವತಿಯಿಂದ ಭಕ್ತರಿಗೆ ಪ್ರಸಾದ ಸ್ವೀಕರಿಸಲು ವ್ಯವಸ್ಥೆಯನ್ನ ಕಲ್ಪಿಸಲಾಗಿತ್ತು.
Post a Comment