ಪಂಜ ಪಂಚಲಿಂಗೇಶ್ವರ ದೇವಳದಲ್ಲಿ ಕದಿರು ಮುಹೂರ್ತ ನೆರವೇರಿತು.

ಸುಬ್ರಮಣ್ಯ, ಆಗಸ್ಟ್ 26 :
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ಪರಂಪರೆಯಂತೆ ಕದಿರು ಮುಹೂರ್ತ ಕಾರ್ಯಕ್ರಮ ಜರಗಿತು. ದೇಗುಲದ ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್ ಅವರು ಕದಿರು ಗದ್ಧೆಗೆ ಪೂಜೆ ಸಲ್ಲಿಸಿ ಕದಿರು ತೆಗೆಯುವ ಶ್ರೇಷ್ಠ ಮುಹೂರ್ತ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತೂರ್, ಸಮಿತಿ ಸದಸ್ಯ ಸಂತೋಷ್ ಕುಮಾರ್ ರೈ, ಪಂಜ ಪಂಚಶ್ರೀ ಜೆಸಿಐ ಅಧ್ಯಕ್ಷ ವಾಚಣ್ಣ ಕೆರೆಮೂಲೆ, ಪಂಜ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗುರುಪ್ರಸಾದ್ ತೋಟ, ಕಾರ್ಯದರ್ಶಿ ಜೀವನ್ ಶೆಟ್ಟಿಗದ್ಧೆ, ಕೋಶಾಧಿಕಾರಿ ಜನಾರ್ಧನ ನಾಗತೀರ್ಥ, ಆಹಾರ ಸಂಚಾಲಕರು ಕುಸುಮಾಧರ ಕೆರೆಯಡ್ಕ ಹಾಗೂ ಕೃಷ್ಣ ವೈಲಾಯ, ಧರ್ಮಪಾಲ ದಾಸ್ ನಾಗತೀರ್ಥ ಸೇರಿದಂತೆ ಊರಿನ ಭಕ್ತರು ಭಾಗವಹಿಸಿದ್ದರು.

ಈ ಮೂಲಕ ಗ್ರಾಮೀಣರ ಸಹಭಾಗಿತ್ವದಲ್ಲಿ ನಡೆದ ಕದಿರು ಮುಹೂರ್ತ ದೇಗುಲದಲ್ಲಿ ನಡೆಯಿತು.🌾

Post a Comment

Previous Post Next Post