ಕಡಬ:ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಗಸ್ಟ್ 26, 2025 ರಂದು ಕಡಬ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ., ಕೆಪಿಸಿಸಿ ಸದಸ್ಯ ಜಿ. ಕೃಷ್ಣಪ್ಪ, ಮಾಜಿ ಜಿ.ಪಂ ಸದಸ್ಯರು ಪಿ.ಪಿ. ವರ್ಗೀಸ್, ಸರ್ವೋತ್ತಮ ಗೌಡ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯಕ್ ,ಕೆಪಿಸಿಸಿ ಸದಸ್ಯ ಸತೀಶ್ ಕೆಡಂಜಿ, ಪ್ರಚಾರ ಸಮಿತಿ ಸದಸ್ಯ ರೋಹಿ ಅಬ್ರಾಮ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಆದಮ್, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಬ್ಬಾಸ್ ಕುಂತೂರ್,ಮತ್ತಿತರ ನಾಯಕರು ಉಪಸ್ಥಿತರಿದ್ದರು.
ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ 13 ವಾರ್ಡ್‌ಗಳಲ್ಲಿ 8 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಸಾಧಿಸಿರುವುದನ್ನು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಲಾಯಿತು. ಇದು ಕಾಂಗ್ರೆಸ್ ಕಾರ್ಯಕರ್ತರ ಹೋರಾಟ ಮತ್ತು ಮತದಾರರ ಬೆಂಬಲದಿಂದ ಬಂದ ನ್ಯಾಯಯುತ ಜಯವಾಗಿದೆ ಎಂದು ಅಭಿಲಾಷ್ ಪಿ.ಕೆ. ತಿಳಿಸಿದರು.
ಬಿಜೆಪಿಯ ಜನವಿರೋಧಿ ನೀತಿ ಹಾಗೂ ಕೋಮುವಾದ ರಾಜಕಾರಣಕ್ಕೆ ಕಡಬ ಮತದಾರರು ಸ್ಪಷ್ಟ ತಿರುಗೇಟು ನೀಡಿದ್ದಾರೆ. ಕಳಾರ ವಾರ್ಡ್‌ನಲ್ಲಿ ಬಿಜೆಪಿ ಶೂನ್ಯ ಸ್ಥಾನ ಪಡೆಯುವಂತೆ ಪರಿಸ್ಥಿತಿ ಉಂಟಾಗಿದೆ ಎಂಬುದನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ವಿಮರ್ಶಿಸಿದರು. “ಹಣ–ಮದ್ಯಪಾನ ಹಂಚಿ ಕಾಂಗ್ರೆಸ್ ಗೆದ್ದಿದೆ” ಎಂಬ ಬಿಜೆಪಿ ನಾಯಕರ ಆರೋಪವನ್ನು ತಳ್ಳಿ ಹಾಕಿದ ಅಭಿಲಾಷ್ ಪಿ.ಕೆ. – “ಕಾಂಗ್ರೆಸ್ ಪಕ್ಷವು ಜನಪ್ರಿಯ ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳ ಆಧಾರದಿಂದ ಗೆದ್ದಿದೆ, ಬಿಜೆಪಿ ಸಂಸ್ಕೃತಿಯ ರೀತಿಯಲ್ಲಿ ನಮ್ಮ ಪಕ್ಷ ನಡೆದುಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಈ ಜಯಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಧ್ಯಕ್ಷರು ಮಂಜುನಾಥ ಭಂಡಾರಿ, ಎಂ.ಸಿ. ವೇಣುಗೋಪಾಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಜಿ.ಎ. ಬಾವಾ, ಪದ್ಮರಾಜ್ ಪೂಜಾರಿ, ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಶಾಸಕರಾದ ಅಶೋಕ್ ಕುಮಾರ್ ರೈ, ಶಕುಂತಳಾ ಶೆಟ್ಟಿ, ಅಭಯಚಂದ್ರ ಜೈನ್, ಐವನ್ ಡಿ.ಸೋಜ, ಮಮತಾ ಗಟ್ಟಿ, ಮಿಥುನ್ ರೈ, ಇನಾಯತ್ ಆಲಿ ಹಾಗೂ ಬ್ಲಾಕ್ ಉಸ್ತುವಾರಿ ಎ.ಸಿ. ವಿನಯರಾಜ್ ಮುಂತಾದವರು ಮಾರ್ಗದರ್ಶನ ನೀಡಿದ್ದಾರೆಂದು ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು.
ಅದೇ ರೀತಿ ಚುನಾವಣಾ ವೀಕ್ಷಕರಾದ ಎಂ.ಎಸ್. ಮಹಮ್ಮದ್, ಸುಭಾಷ್ ಚಂದ್ರ ಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಮತದಾರರಿಗೆ ಸಹ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಯಿತು.
Post a Comment