03 ಪ್ರತ್ಯೇಕ ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆ‌ಮರೆಸಿಕೊಂಡಿದ್ದ ಆರೋಪಿಗಳ ದಸ್ತಗಿರಿ.

ಪುತ್ತೂರು: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪುತ್ತೂರು ಉಪವಿಭಾಗದ ಪೊಲೀಸ್ ತಂಡಗಳು ಪತ್ತೆಹಚ್ಚಿ ದಸ್ತಗಿರಿಮಾಡಿದ್ದಾರೆ.

1️⃣ ಪುತ್ತೂರು ನಗರ ಠಾಣಾ ಪ್ರಕರಣ
ಪುತ್ತೂರು ನಗರ ಠಾಣಾ ಅ.ಕ್ರ: 69/2023, ಕಲಂ: 379 ಐ.ಪಿ.ಸಿ. ಪ್ರಕರಣದಲ್ಲಿ 09 ಬಾರಿ ವಾರಂಟ್ ಜಾರಿಯಾಗಿದ್ದರೂ ವಿಚಾರಣೆಗೆ ಹಾಜರಾಗದ ಹಾವೇರಿ ಜಿಲ್ಲೆಯ ಸವಣೂರು ನಿವಾಸಿ ಶಿವಕುಮಾರ್ @ ಶಿವು ಎಂಬಾತನನ್ನು, ಪುತ್ತೂರು ಉಪವಿಭಾಗದ ಡಿವೈಎಸ್‌ಪಿ ಅರುಣ್ ನಾಗೇಗೌಡರವರ ಹಾಗೂ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕ ಕಿರಣ್ ಜಾನ್ಸನ್ ಡಿಸೋಜಾರವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಠಾಣಾ ಪಿಎಸ್‌ಐ ಕೌಶಿಕ್ ಅವರ ನೇತೃತ್ವದ ವಿಶೇಷ ಪೊಲೀಸ್ ತಂಡವು 12.08.2025ರಂದು ಬೆಂಗಳೂರಿನ ಅಬ್ಜಿಗೆರೆಯಲ್ಲಿ ದಸ್ತಗಿರಿ ಮಾಡಿದೆ.

2️⃣ ಉಪ್ಪಿನಂಗಡಿ ಠಾಣಾ ಪ್ರಕರಣ
ಉಪ್ಪಿನಂಗಡಿ ಠಾಣಾ ಅ.ಕ್ರ: 14/2022, ಕಲಂ: 394 ಐ.ಪಿ.ಸಿ. ಪ್ರಕರಣದಲ್ಲಿ 03 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೆಂಗಳೂರು, ಜಗಜೀವನ್ ರಾಮ್ ನಗರ ನಿವಾಸಿ ಸಯ್ಯದ್ ಕಲೀಂ @ ಕಲ್ಲು ಮಾಮು ಎಂಬಾತನನ್ನು, ಪುತ್ತೂರು ಉಪವಿಭಾಗದ ಉಪಾಧೀಕ್ಷಕ ಅರುಣ್ ನಾಗೇಗೌಡರವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್., ಪಿಎಸ್‌ಐ ಕೌಶಿಕ್, ಹಾಗೂ CHC-826 ಶಿವರಾಮ ರೈ ಮತ್ತು ಡಿವೈಎಸ್‌ಪಿ ವಿಶೇಷ ತಂಡದ ಸಿಬ್ಬಂದಿಗಳ ಸಹಯೋಗದಲ್ಲಿ ದಸ್ತಗಿರಿ ಮಾಡಲಾಗಿದೆ.
ಸದ್ರಿ ಆರೋಪಿಯ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಒಟ್ಟು 4 ಪ್ರಕರಣಗಳು ದಾಖಲಾಗಿವೆ.

3️⃣ ಕಡಬ ಠಾಣಾ ಪ್ರಕರಣ
ಕಡಬ ಠಾಣಾ ಅ.ಕ್ರ: 91/2019, ಕಲಂ: 341, 323, 324, 504, 506 R/w 34 ಐ.ಪಿ.ಸಿ. ಪ್ರಕರಣದಲ್ಲಿ 03 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಡಬ, ರಾಮಕುಂಜ ನಿವಾಸಿ ಯೂಸೂಫ್ (32) ಎಂಬಾತನನ್ನು ಕಡಬ ಠಾಣಾ ಪೊಲೀಸರು 12.08.2025ರಂದು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಸದ್ರಿ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಪೊಲೀಸರ ಕಾರ್ಯಚರಣೆಯಿಂದ ಹಲವು ವರ್ಷಗಳಿಂದ ತಪ್ಪಿಸಿಕೊಂಡು ಅಡಗಿಕೊಂಡಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Post a Comment

أحدث أقدم