ಸುಬ್ರಹ್ಮಣ್ಯ:ಸುಬ್ರಹ್ಮಣ್ಯ ಗ್ರಾಮದ ಕಡಬ ನಿವಾಸಿ ಪ್ರವೀಣ್ ಕುಮಾರ್ (38), ತಂದೆ ಆನಂದ ಐತಾಳ್ ಅವರ ಮನೆಯಲ್ಲಿ ಲಕ್ಷಾಂತರ ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳವು ಪ್ರಕರಣ ದಾಖಲಾಗಿದೆ.
ಪೊಲೀಸ್ ಮಾಹಿತಿಯಂತೆ, ಪ್ರವೀಣ್ ಕುಮಾರ್ ಅವರು ಪ್ರತಿನಿತ್ಯ ಬೆಳಗ್ಗೆ 4 ಗಂಟೆಗೆ ಮಠದಲ್ಲಿ ಪೌರೋಹಿತ್ಯ ಕೆಲಸಕ್ಕಾಗಿ ತೆರಳುತ್ತಿದ್ದರು. ಆಗಸ್ಟ್ 6 ರಂದು ಮಗನ ಪೂಜಾ ಕಾರ್ಯಕ್ರಮಕ್ಕಾಗಿ ಮನೆಯ ಕಪಾಟಿನಲ್ಲಿ ಇಟ್ಟಿದ್ದ ಹಣ ತೆಗೆದುಕೊಳ್ಳಲು ಹೋಗಿದಾಗ, 18 ಲಕ್ಷ ನಗದು ಹಾಗೂ ಒಟ್ಟು 273 ಗ್ರಾಂ ಚಿನ್ನಾಭರಣ ಕಾಣೆಯಾಗಿರುವುದು ಪತ್ತೆಯಾಯಿತು.
ಕಳವಾದ ಚಿನ್ನಾಭರಣಗಳಲ್ಲಿ ಚಿನ್ನದ ತುಳಸಿ ಮಣಿಸರ, ಹೂವಿನ ಚಿತ್ತಾರದ ವೆಂಕಟೇಶ್ವರ ಪೆಂಡೆಂಟ್ ಇದ್ದ ಸರ, ಬ್ರಾಸ್ಲೈಟ್, ಲಾಂಗ್‌ಚೈನ್, ನೆಕ್ಲೇಸ್, ಬಳೆಗಳು, ಪೆಂಡೆಂಟ್‌ಗಳೊಂದಿಗೆ ಚಿಕ್ಕ ಚೈನ್‌ಗಳು ಹಾಗೂ ವಿವಿಧ ಉಂಗುರಗಳು ಸೇರಿವೆ.
ಒಟ್ಟು ಕಳವಾದ ಆಸ್ತಿ ಮೌಲ್ಯ ₹31,65,000/- ಆಗಿದ್ದು, 20 ವರ್ಷಗಳಿಂದ ಪೌರೋಹಿತ್ಯ ವೃತ್ತಿಯಿಂದ ಸಂಗ್ರಹಿಸಿದ ಹಣ ಮತ್ತು ಆಭರಣ ಎಂದು ಫಿರ್ಯಾದಿದಾರರು ತಿಳಿಸಿದ್ದಾರೆ. ಮನೆಯಲ್ಲಿ ಯಾವುದೇ ಲಾಕರ್‌ಗಳನ್ನು ಒಡೆದ ಲಕ್ಷಣಗಳಿಲ್ಲ, ಕೀ ಫಿರ್ಯಾದಿದಾರರ ಬಳಿಯೇ ಇತ್ತು, ಕಳವು ಸಮಯದಲ್ಲಿ ಮನೆಯಲ್ಲಿ ಪತ್ನಿ ಮಾತ್ರ ಇದ್ದರು ಎಂದು ಹೇಳಲಾಗಿದೆ.
ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 42/2025, ಕಲಂ 305 ಬಿಎನ್‌ಎಸ್ 2023ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Post a Comment