ಸುಬ್ರಹ್ಮಣ್ಯ:ನಾಗಾರಾಧನೆಯ ಮಹತ್ವದ ಪುಣ್ಯತಾಣವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 31, ಆದಿತ್ಯವಾರ ಹೊಸ್ತಾರೋಗಣೆ (ನವಾನ್ನ ಬೋಜನ) ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ದರುಶನ ಮತ್ತು ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಳಿಗ್ಗೆ 5.15ಕ್ಕೆ ಶ್ರೀ ದೇವರಿಗೆ ಮಹಾಭಿಷೇಕ ನೆರವೇರಲಿದೆ. ನಂತರ 7.30ಕ್ಕೆ ತೆನೆ ತರುವುದು ಮತ್ತು ಕದಿರು ಪೂಜೆ ನಡೆಯಲಿದ್ದು, ಬಳಿಕ ಭಕ್ತರಿಗೆ ಕದಿರು ವಿತರಣೆ ನೆರವೇರಲಿದೆ.
ದರಶನ ವ್ಯತ್ಯಯ:
ಹೊಸ್ತಾರೋಗಣೆಯ ನಿಮಿತ್ತ ಬೆಳಿಗ್ಗೆ 10 ಗಂಟೆಯ ನಂತರದಿಂದ ಮಾತ್ರ ಭಕ್ತರಿಗೆ ಶ್ರೀ ದೇವರ ದರುಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಅಲ್ಲದೆ, ಆಶ್ಲೇಷ ಬಲಿ ಸೇವೆ ಬೆಳಿಗ್ಗೆ 9 ಗಂಟೆಯಿಂದ ಆರಂಭವಾಗಿ ಎರಡು ಪಾಳಿಗಳಲ್ಲಿ ನಡೆಯಲಿದೆ.
ಭಕ್ತರು ತಾಳ್ಮೆಯಿಂದ ಸಹಕರಿಸಬೇಕೆಂದು ದೇವಳದ ಪ್ರಕಟಣೆ ತಿಳಿಸಿದೆ.
Post a Comment