ಸುಬ್ರಹ್ಮಣ್ಯ ಗ್ರಾಮ ಪಂಚಾಯತಿನಲ್ಲಿ 59ನೇ ಸ್ವಾತಂತ್ರ್ಯ ಉತ್ಸವ ಆಚರಣೆ.

ಸುಬ್ರಹ್ಮಣ್ಯ ಆಗಸ್ಟ್ 15 : ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನಲ್ಲಿ 59ನೇ ಸ್ವಾತಂತ್ರ್ಯೋತ್ಸವವನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಎನ್ ಎಸ್ ಅವರು ಧ್ವಜಾರೋಹಣಗೈದರು. ಅವರು ಮಾತನಾಡುತ್ತಾ "ಅಖಂಡ ಭಾರತದ ಅಭಿವೃದ್ಧಿಗೆ ನಾವೆಲ್ಲರೂ ಒಂದುಗೂಡಿ ಸಂಕಲ್ಪ ಮಾಡೋಣ .ನಮ್ಮ ಭಾರತೀಯ ಯೋಧರನ್ನ ಗೌರವಿಸೋಣ ಪ್ರೀತಿ ಪ್ರೇಮ ಗೌರವ ನಂಬಿಕೆಯಿಂದ ಬಾಳೋಣ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವೀರರನ್ನ, ಬಲಿದಾನಗೆದವರನ್ನು ನಾವು ಈ ದಿನ ಸ್ಮರಿಸುವುದು ನಮ್ಮ ಕರ್ತವ್ಯ "ಎಂದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಹಾಗೂ ಕಡಬು ತಾಲೂಕು ಕೆ ಡಿ ಪಿ ಸದಸ್ಯ ಶಿವರಾಮ ರೈ ಮಾತನಾಡಿದರು. ಇದೇ ವೇಳೆ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ. ಎ ಎ ತಿಲಕ್ ಅವರು ರೋಗಿಗಳು ಹಾಗೂ ಶವ ಸಾಗಿಸಲು ಅನುಕೂಲವಾಗುವಂತೆ ಸ್ಟ್ರಕ್ಚರನ್ನು ಪಂಚಾಯಿತಿಗೆ ಕೊಡುಗೆಯಾಗಿ ನೀಡಿದರು. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯರುಗಳು, ಊರ ಮಹಾನೀಯರು, ಸಂಘ-ಸಂಸ್ಥೆಗಳ ಅಧ್ಯಕ್ಷರು, ಹಾಗೂ ಸದಸ್ಯರು ಮತ್ತು ಸಾರ್ವಜನಿಕರು ಹಾಜರಿದ್ದರು. ಸುಬ್ರಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಮೋನಪ್ಪ ದೋಣಿವಕ್ಕಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

Post a Comment

أحدث أقدم