ಕನ್ಯಾನದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರದ ಕಾಣಿಕೆ ಕಟ್ಟೆ ಕಳ್ಳತನ – ಮೂವರು ಯುವಕರು ವಶಕ್ಕೆ

ಬಂಟ್ವಾಳ, ಆಗಸ್ಟ್ 3: ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ದೇಲಂತಬೆಟ್ಟು ಪ್ರದೇಶದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಕ್ಕೆ ಸಂಬಂಧಿಸಿದ ಎರಡು ಕಾಣಿಕೆ ಕಟ್ಟೆಗಳಲ್ಲಿ ಸಂಗ್ರಹವಾಗಿದ್ದ ಹಣವನ್ನು ಕಳ್ಳರು ಲುಟಿ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಪಿರ್ಯಾದಿನ ಪ್ರಕಾರ, ದೇಲಂತಬೆಟ್ಟು, ಕನ್ಯಾನ ನಿವಾಸಿಯಾದ 72 ವರ್ಷದ ಡಿ. ನಾರಾಯಣ ರಾವ್ ಎಂಬವರು ಸ್ಥಳೀಯ ಧಾರ್ಮಿಕ ಶ್ರದ್ಧಾ ಕೇಂದ್ರದ ಅಧ್ಯಕ್ಷರಾಗಿದ್ದು, ಅವರು ದೇಲಂತಬೆಟ್ಟು ಶಾಲಾ ಪಕ್ಕದ ರಸ್ತೆ ಬದಿಯಲ್ಲಿ ಹಾಗೂ ದೇಲಂತಬೆಟ್ಟು ಚರ್ಚಿನ ಕೆಳಗಡೆ ರಸ್ತೆಯ ಬದಿಯಲ್ಲಿ ಅಳವಡಿಸಿದ್ದ ಕಾಣಿಕೆ ಕಟ್ಟೆಗಳನ್ನು ದಿನಾಂಕ 26-07-2025 ರಂದು ಪರಿಶೀಲಿಸಲು ತೆರಳಿದಾಗ, ಎರಡೂ ಕಾಣಿಕೆ ಕಟ್ಟೆಗಳ ಬೀಗ ಒಡೆದು ಹಣ ಕಳವಾದಿರುವುದು ಗಮನಕ್ಕೆ ಬಂದಿದೆ. ಅಂದಾಜು ₹12,000 ರಿಂದ ₹15,000 ರಷ್ಟು ನಗದು ಕಳವಾಗಿದೆ ಎಂದು ಹೇಳಲಾಗಿದೆ.

ಈ ಸಂಬಂಧ ಡಿ. ನಾರಾಯಣ ರಾವ್ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅ.ಕ್ರ. 95/2025, ಭಾರತೀಯ ದಂಡ ಸಂಹಿತೆಯ ಕಲಂ 303(2) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ಪ್ರಕರಣದ ಕುರಿತು ತನಿಖೆ ಕೈಗೊಂಡು ಶೀಘ್ರದಲ್ಲೇ ಈ ಪ್ರಕರಣದ ಶಂಕಿತರಾದ ಮೂವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಳ್ಳಲ್ಪಟ್ಟವರು ಈ ಕೆಳಗಿನಂತಿದ್ದಾರೆ:
1. ತ್ವಾಹಿದ್ (19), ವಾಸ: ವಿಟ್ಲ ಕಸಬಾ ಗ್ರಾಮ
2. ಉಮ್ಮರ್ ಫಾರೂಕ್ (18), ವಾಸ: ವಿಟ್ಲ ಕಸಬಾ ಗ್ರಾಮ
3. ಮೊಹಮ್ಮದ್ ನಬೀಲ್ (18), ವಾಸ: ವಿಟ್ಲ ಕಸಬಾ ಗ್ರಾಮ

ತನಿಖೆ ಇನ್ನೂ ಮುಂದುವರೆದಿದ್ದು, ಕಳವಾದ ಹಣ ಪತ್ತೆ ಹಾಗೂ ಕೃತ್ಯದ ಹಿಂದಿನ ಇತರ ಮಾಹಿತಿ ಹೊರಬರುವ ನಿರೀಕ್ಷೆಯಿದೆ.

Post a Comment

Previous Post Next Post