ನ್ಯೂಸ್ ಪ್ಯಾಡ್ ವಾಟ್ಸಾಪ್ ಗ್ರೂಪ್ ರಚನೆಯ ಉದ್ದೇಶ ನಮ್ಮ ಸುತ್ತಮುತ್ತ ನಡೆಯುವ ಸುದ್ದಿಗಳನ್ನು ಸಾರ್ವಜನಿಕರಿಗೆ ತಲುಪಿಸುವುದು ಹಾಗೂ ಸಮಾಜದ ಒಳಿತಿಗಾಗಿ ಮಾಹಿತಿಯನ್ನು ಹಂಚಿಕೊಳ್ಳುವುದು. ಈ ಗ್ರೂಪಿನಲ್ಲಿ ಮಹಿಳೆಯರು, ಮಕ್ಕಳು, ಮಧ್ಯವಯಸ್ಕರು, ಸಮಾಜದ ಗಣ್ಯರು ಹಾಗೂ ಅಧಿಕಾರಿಗಳು ಸೇರಿದಂತೆ ಅನೇಕರು ಸದಸ್ಯರಾಗಿದ್ದಾರೆ.
ಇತ್ತೀಚೆಗೆ ನಮ್ಮ ಗಮನಕ್ಕೆ ಬಂದಿರುವುದೇನೆಂದರೆ – ಕೆಲವೊಂದು ಸಂದರ್ಭಗಳಲ್ಲಿ ಸದಸ್ಯರ ವೈಯಕ್ತಿಕ ವಾಟ್ಸಾಪ್ ನಂಬರಿಗೆ ಅನಗತ್ಯವಾಗಿ ಸಂದೇಶ/ಕಾಲ್ ಹೋಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಎಲ್ಲ ಸದಸ್ಯರಿಗೂ ವಿನಂತಿ:
ನ್ಯೂಸ್ ಪ್ಯಾಡ್ ವಾಟ್ಸಾಪ್ ಗ್ರೂಪ್ ಅನ್ನು ಕೇವಲ ಸುದ್ದಿ ಓದಲು, ಮಾಹಿತಿ ಪಡೆಯಲು ಮತ್ತು ಸಮಾಜಮುಖಿ ವಿಚಾರಗಳನ್ನು ಹಂಚಿಕೊಳ್ಳಲು ಮಾತ್ರ ಬಳಸಬೇಕು.
ಯಾರೊಬ್ಬ ಸದಸ್ಯರೂ ಮಹಿಳೆಯರಿಗಾಗಲಿ, ಮಕ್ಕಳಿಗಾಗಲಿ ಅಥವಾ ಇತರ ಸದಸ್ಯರ ವೈಯಕ್ತಿಕ ನಂಬರಿಗೆ ಅನಗತ್ಯ ಸಂದೇಶ ಅಥವಾ ಕರೆ ಮಾಡುವಂತಿಲ್ಲ.
ಇಂತಹ ಅಸಮರ್ಪಕ ವರ್ತನೆ ಯಾರಿಗಾದರೂ ಎದುರಾದಲ್ಲಿ, ಅವರು ತಮಗೆ ಬಂದ ನಂಬರನ್ನು ಬ್ಲಾಕ್ ಮಾಡಿ, ಅಗತ್ಯವಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬಹುದು.
ನಮ್ಮ ಗ್ರೂಪಿನ ಗೌರವ, ವಿಶ್ವಾಸ ಹಾಗೂ ಸಮಾಜಮುಖಿ ಉದ್ದೇಶ ಉಳಿಯಲು, ಎಲ್ಲ ಸದಸ್ಯರು ಈ ಸೂಚನೆಗೆ ಸಹಕಾರ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ.
إرسال تعليق