ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಸುಬ್ರಹ್ಮಣ್ಯದ ಅಧ್ಯಕ್ಷೆ ವಿಮಲ ರಂಗಯ್ಯ ದೀಪ ಬೆಳಗಿಸಿ, “ಚೆಣ್ಣೆ ಮನೆ” ಆಡುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ಗುಣವತಿ, ಗ್ರಾಮ ಪಂಚಾಯತ್ ಸದಸ್ಯೆ ಭಾರತಿ ದಿನೇಶ್, ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಶೋಭ ಗಿರಿಧರ, ವಾಣಿ ವನಿತಾ ಸಮಾಜದ ಕಾರ್ಯದರ್ಶಿ ಸುಜಾತ ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾಜದ ಅಧ್ಯಕ್ಷೆ ಪುಷ್ಪ ಕೆ. ಸ್ವಾಗತ ಭಾಷಣ ಮಾಡಿ, ಕಾರ್ಯದರ್ಶಿ ಸುಜಾತ ಗಣೇಶ್ ವಂದಿಸಿದರು. ರತ್ನಕುಮಾರಿ ಕಾರ್ಯಕ್ರಮ ನಿರೂಪಿಸಿದರು.
ಸಾಂಪ್ರದಾಯಿಕ ಆಟಗಳಾದ ಮೂಡೆ ಕಟ್ಟುವ ಸ್ಪರ್ಧೆ, ಜನಪದ ಪಂಥೋಲು, ಅಟಿದ ಅಟಿಲ್, ಚೆಣ್ಣೆ ಮನೆ ಸ್ಪರ್ಧೆಗಳು ಉತ್ಸಾಹಭರಿತವಾಗಿ ಜರುಗಿದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.
ಆಟಿ ಹಬ್ಬದ ಈ ಸಂಭ್ರಮ ಸ್ಥಳೀಯ ಮಹಿಳೆಯರ ಸಾಂಸ್ಕೃತಿಕ ಏಕತೆಯನ್ನು ಮತ್ತು ಪರಂಪರೆ ಉಳಿಸಿ ಬೆಳೆಸುವ ಪ್ರಯತ್ನ ಇದಾಗಿತ್ತು.
إرسال تعليق