ಕಡಬ ತಾಲೂಕು ಪಂಚಾಯತ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ “ನಮ್ಮ ಸಂಸ್ಕೃತಿ – ಸ್ವಚ್ಛ ಸಂಸ್ಕೃತಿ” ಧ್ಯೇಯವಾಕ್ಯದೊಂದಿಗೆ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸಂಬಂಧ ಪೂರ್ವಭಾವಿ ಸಭೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ನ ಕುಮಾರಧಾರ ಸಭಾಂಗಣದಲ್ಲಿ ನೆರವೇರಿತು.
ಸಭೆಯ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತಾ ಅವರು ವಹಿಸಿದ್ದರು.
ಮುಖ್ಯ ಅಂಶಗಳು
ಸಭೆಯ ಆರಂಭದಲ್ಲಿಯೇ ಗ್ರಾಮಸ್ಥರು ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖ್ಯಸ್ಥರು ಕಡ್ಡಾಯವಾಗಿ ಹಾಜರಿರಬೇಕು ಎಂದು ಒತ್ತಾಯಿಸಿದರು.
ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ, ಈ ಹಿಂದೆ ಪುತ್ತೂರಿನಲ್ಲಿ 10 ದಿನಗಳ ಕಾಲ ನಡೆದ ಸ್ವಚ್ಛತಾ ಕಾರ್ಯಕ್ರಮದ ಯಶಸ್ಸಿನ ಕುರಿತು ವಿವರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ನರೇಗಾ ಯೋಜನೆಯ ಓಂಬುಡ್ಸ್‌ಮ್ಯಾನ್ ಶೀನಾ ಶೆಟ್ಟಿ ಅವರು “ಸ್ವಚ್ಛ ಸಂಸ್ಕೃತಿ – ನಮ್ಮ ಸಂಸ್ಕೃತಿ”ಯ ಉದ್ದೇಶ ಮತ್ತು ಅದರ ಕಾರ್ಯಗತಗೊಳಿಸುವಿಕೆ ಕುರಿತು ವಿವರವಾದ ಮಾಹಿತಿ ನೀಡಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ಲಾಸ್ಟಿಕ್ ಮುಕ್ತ ಕ್ರಮಗಳು
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಮಾತನಾಡುತ್ತಾ ಪ್ಲಾಸ್ಟಿಕ್ ಮುಕ್ತ ಸುಬ್ರಹ್ಮಣ್ಯ ಕ್ಷೇತ್ರಕ್ಕಾಗಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು:
1. ಕ್ಷೇತ್ರದ ಮುಖ್ಯ ರಸ್ತೆ, ಪಾರ್ಕಿಂಗ್ ಹಾಗೂ ದೇವಸ್ಥಾನದ ಹೊರಭಾಗಗಳಲ್ಲಿ ಜಾಗೃತಿ ಫಲಕಗಳ ಅಳವಡಿಕೆ.
2. ಪ್ರಸಾದ ವಿತರಣೆಗಾಗಿ ಬಟ್ಟೆ ಚೀಲಗಳ ಬಳಕೆ – ಲಡ್ಡು, ಪಂಚಗಜ್ಜಾಯ, ಕಲ್ಲು ಸಕ್ಕರೆ ಮೊದಲಾದವು.
3. ಕ್ಷೇತ್ರ ಪ್ರವೇಶದ ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ ಮೂಲಕ ಪ್ಲಾಸ್ಟಿಕ್ ತಡೆ.
4. ಹೋಟೆಲ್ ಮತ್ತು ಅಂಗಡಿ ಮಾಲೀಕರಿಗೆ ಜಾಗೃತಿ ಕರಪತ್ರ ವಿತರಣೆ.
5. ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಮೈಕ್ ಮೂಲಕ ಜಾಗೃತಿ ಕಾರ್ಯಕ್ರಮಗಳು.
6. ಕ್ಷೇತ್ರದ ಆಸುಪಾಸಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸ್ವಚ್ಛಗೊಳಿಸುವಿಕೆ.
7. ದೇವಸ್ಥಾನದ ಒಳ–ಹೊರಾಂಗಣದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ, ಕಟ್ಟುನಿಟ್ಟಿನ ಪಾಲನೆ.
8. ಹೆಚ್ಚುವರಿ ಸಿಸಿ ಕ್ಯಾಮೆರಾ ಅಳವಡಿಕೆ.
9. ದೇವಸ್ಥಾನದ ಹೊರಭಾಗ, ಪಾರ್ಕಿಂಗ್‌ಗಳಲ್ಲಿ ಪ್ಲಾಸ್ಟಿಕ್ ವೇಸ್ಟ್ ಟಬ್‌ಗಳ ಅಳವಡಿಕೆ.
10. ನಿಯಮ ಪಾಲಿಸದಿದ್ದಲ್ಲಿ ದಂಡನೆ ಗ್ಯಾರಂಟಿ.
ಸಭೆಯಲ್ಲಿ ಪಾಲ್ಗೊಂಡವರು
ಹರೀಶ್ ಇಂಜಾಡಿ – ಅಧ್ಯಕ್ಷರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ
ರಾಜೇಶ್ ಎನ್.ಎಸ್. – ಉಪಾಧ್ಯಕ್ಷ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್
ಮಹೇಶ್ – ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಮೋನಪ್ಪ ಡಿ. – ಕಾರ್ಯದರ್ಶಿ, ಗ್ರಾಮ ಪಂಚಾಯತ್
ಶೀನಾ ಶೆಟ್ಟಿ – ಜಿಲ್ಲಾ ಪಂಚಾಯತ್ ಓಂಬುಡ್ಸ್‌ಮ್ಯಾನ್
ನವೀನ್ ಭಂಡಾರಿ – ಕಾರ್ಯನಿರ್ವಹಣಾಧಿಕಾರಿ, ಕಡಬ ತಾಲೂಕು ಪಂಚಾಯತ್
ಏಸುರಾಜ್ – ಸಹಾಯಕ ಕಾರ್ಯನಿರ್ವಹಣಾಧಿಕಾರಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ
ಡಾ. ಶಿವಕುಮಾರ್ ಹೊಸಳ್ಳಿಕೆ, ಶಿವರಾಮ ರೈ, ಅಶೋಕ್ ಕುಮಾರ್ ಮೂಲೆ, ಡಾ. ರವಿ ಕಕ್ಕೆಪದವ್, ಚಂದ್ರಶೇಖರ ನಾಯರ್, ಉಪವಲಯ ಅರಣ್ಯಾಧಿಕಾರಿ ಅಪೂರ್ವ, ಪವನ್ ಕುಮಾರ್, ವಿಮಲ ರಂಗಯ್ಯ, ಗೋಪಾಲ ಎಣ್ಣೆ ಮಜಲ್ ಮೊದಲಾದ ಗಣ್ಯರು.
ಸಭೆಯಲ್ಲಿ ಪಾಲ್ಗೊಂಡವರು ಹಲವಾರು ವರ್ಷಗಳಿಂದ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ, ಆದರೆ ಈಗ ಜಾಗೃತಿ ಸಾಕಾಗುವುದಿಲ್ಲ – ಕಟ್ಟುನಿಟ್ಟಿನ ಅನುಷ್ಠಾನವೇ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶೇಷ ಘಟನೆಗಳು
ಸಭೆಯ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟ ತಯಾರಿಸಿದ ಬಟ್ಟೆ ಚೀಲಗಳನ್ನು ಪ್ರದರ್ಶಿಸಲಾಯಿತು.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನಿರ್ಮಿಸಿದ ಕಬ್ಬಿಣದ ಬಾಟಲ್ ಬೂತ್‌ಗಳನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮ ನಿರೂಪಣೆ – ಕಡಬ ತಾಲೂಕು ಪಂಚಾಯತ್ ನರೇಗಾ ಯೋಜನೆಯ ಐಇಸಿ ಭರತ್ ರಾಜ್.
ಸ್ವಾಗತ– ಮೋನಪ್ಪ ಡಿ., ಕಾರ್ಯದರ್ಶಿ.
ವಂದನೆಗಳು – ಮಹೇಶ್, ಅಭಿವೃದ್ಧಿ ಅಧಿಕಾರಿ.
Post a Comment